ಕರಾವಳಿ ವಾಯ್ಸ್ ನ್ಯೂಸ್

Banner Ad

ಕಾರವಾರ: ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರು, ವಾಹನ ಚಾಲಕರು ಹಾಗೂ ಗ್ರೂಪ್ ‘ಡಿ’ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಶಾಖೆ ವತಿಯಿಂದ ನಗರದ ಧೈವಜ್ಞ ಕಲ್ಯಾಣ ಮಂಟಪದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಜಿಲ್ಲಾ ಘಟಕ, ವಿಶೇಷ ಘಟಕ ಹಾಗೂ ತಾಲ್ಲೂಕು ಸಂಘದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸನ್ಮಾನ ಹಾಗೂ ನಿವೃತ್ತ ಬೋಧಕೇತರ ನೌಕರರಿಗೆ ಅವರ ದೀರ್ಘಕಾಲದ ಸೇವೆಗಾಗಿ ಗೌರವ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ಮಹ್ಮದ್ ಯುಸೂಫ್ ನರಗುಂದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಘಟಕದ ಅಧ್ಯಕ್ಷ ಶರದ್ ಟಾಕೇಕರ ಸ್ವಾಗತಿಸಿದರು. ಉಪನಿರ್ದೇಶಕಿ(ಆಡಳಿತ) ಲತಾ ಎಂ. ನಾಯಕ ಕಾರ್ಯಕ್ರಮ ಉದ್ಘಾಟಿಸಿ, ಆಡಳಿತದಲ್ಲಿ ಬೋಧಕೇತರ ಸಿಬ್ಬಂದಿಯ ಜವಾಬ್ದಾರಿ ವಿವರಿಸಿದರು. ಉಪನಿರ್ದೇಶಕ (ಅಭಿವೃದ್ಧಿ), ಕುಮಟಾ ಡಯಟ್ ಪ್ರಾಚಾರ್ಯಎನ್.ಆರ್. ಹೆಗಡೆ ನಿವೃತ್ತ ನೌಕರರನ್ನು ಸನ್ಮಾನಿಸಿ, ಬೋಧಕೇತರ ಸಿಬ್ಬಂದಿಗೆ ಡಯಟ್ ಮೂಲಕ ಕಾಲಕಾಲಕ್ಕೆ ತರಬೇತಿ ನೀಡುವ ಭರವಸೆ ನೀಡಿದರು.

ರಾಜ್ಯಾಧ್ಯಕ್ಷ ನವೀನ ಎಸ್.ಆರ್. ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ, ನೌಕರರ ಸಮಸ್ಯೆಗಳನ್ನು ರಾಜ್ಯಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ. ಹಕ್ಕುಗಳನ್ನು ಪಡೆಯಲು ಸಂಘಟನೆ ಬಲಪಡಿಸುವುದು ಅಗತ್ಯ ಎಂದರು.

ರಾಜೇಂದ್ರ ನಾಯ್ಕ, ಪ್ರಮೋದ ದೊಡ್ಮನಿ, ರಾಮಚಂದ್ರ ನಾಯ್ಕ, ಅಭಿಷೇಕ ನಾಯಕ, ರಾಮನಾಥ ಸಾವುಕಾರ, ಅಶೋಕ ಗೌಡ, ಪ್ರಣಾಮ ನಾಯ್ಕ, ಕವಿತಾ ಪಟಗಾರ, ಮಹಾದೇವ ಬಲಿಯಾ ಗೌಡ, ರಾಘವೇಂದ್ರ ಪಿ., ವಿನೋದ ನಾಯ್ಕ, ಕಿರಣಕುಮಾರ ಜಿ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

 

 

 

 

 

Please Share: