ಕರಾವಳಿ ವಾಯ್ಸ್ ನ್ಯೂಸ್ 

ಕುಮಟಾ: ಗೋಕರ್ಣದ ದುಬ್ಬನಶಶಿ ಬೀಚ್‌ನಲ್ಲಿ ಭಾನುವಾರ ಸಂಭವಿಸಿದ ಸಮುದ್ರ ದುರಂತದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ 24 ವರ್ಷದ ಯುವಕನ ಮೃತದೇಹ ಸೋಮವಾರ ಬೆಳಗಿನ ಜಾವ ಪತ್ತೆಯಾಗಿದೆ.

Banner Ad

ಬೆಂಗಳೂರಿನ ಬಾಬುಸಾಪಾಳ್ಯದ ವಿಶ್ವೇಶ್ ಎ.ಕೆ. (24) ಎಂಬುವವರ ಮೃತದೇಹವು ನ.2ರ ಬೆಳಗಿನ ಜಾವ 1.45ರ ಸುಮಾರಿಗೆ ದುಬ್ಬನಶಶಿ ಬೀಚ್ ಸಮೀಪ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಸಮುದ್ರದಲ್ಲಿ ಆಟವಾಡುತ್ತಿದ್ದ ವೇಳೆ ಭಾರಿ ಅಲೆಗಳ ಸೆಳೆತಕ್ಕೆ ಸಿಲುಕಿ ಅವರು ನಾಪತ್ತೆಯಾಗಿದ್ದರು. ಬಳಿಕ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು.

ಬೆಂಗಳೂರಿನ ಬೆಳ್ಳಂದೂರಿನ ಆಲೋರಿಕಾ ಇಕೋಸ್ಪೇಸ್ ಕಂಪನಿಯ 16 ಉದ್ಯೋಗಿಗಳ ತಂಡವು ಅ.31ರಂದು ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿ ದುಬ್ಬನಶಶಿ ಬೀಚ್‌ನ ಕೋಜೆ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿತ್ತು. ನ.1ರಂದು ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದ ತಂಡದ ಐವರು ಭಾರಿ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದರು. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಇಬ್ಬರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿತ್ತು. ವಿಶ್ವೇಶ್ ನಾಪತ್ತೆಯಾಗಿದ್ದರು.

ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸರು ಸಂಬಂಧಿಕರಿಂದ ದೂರು ಪಡೆದು ಯುಡಿಆರ್ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

 

 

 

 

 

Please Share: