ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಹುಬ್ಬಳ್ಳಿ–ಅಂಕೋಲಾ ರಾಷ್ಟ್ರೀಯ ಹೆದ್ದಾರಿಯ ಎಕ್ಕೆಗುಳಿ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸುಮಾರು 6 ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.

Banner Ad

ಮಾಸ್ತಿಕಟ್ಟಾ ವಲಯದ ಎಕ್ಕೆಗುಳಿ (ಬಡಿಗೋಣ) ಬಳಿ ರಸ್ತೆ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಿರತೆಯ ಮುಖ, ಕಣ್ಣು ಹಾಗೂ ಕಿವಿಯ ಭಾಗದಲ್ಲಿ ರಕ್ತಸ್ರಾವವಾಗಿರುವುದು ಕಂಡುಬಂದಿದೆ.

ಹೆದ್ದಾರಿ ಪಕ್ಕದ ಪೊದೆಯಲ್ಲಿ ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಂಜೆ 6.30ರ ಸುಮಾರಿಗೆ ಅರಣ್ಯ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಡಿಸಿಎಫ್ ಅಂತೋನಿ ಹಾಗೂ ಎಸಿಎಫ್ ಪ್ರಫುಲ್ಲ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟಾ ಅರಣ್ಯಾಧಿಕಾರಿ ಪ್ರವೀಣ ನಾಯಕ, ಉಪ ಅರಣ್ಯಾಧಿಕಾರಿ ಎಂ.ಬಿ. ಗೌಡ ಹಾಗೂ ಬೀಟ್ ಫಾರೆಸ್ಟರ್ ಈರಣ್ಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Please Share: