ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ನಗರದ ರಾಜೀವ್ ನಗರದ ಮಸೀದಿ ಸಮೀಪ ರಾತ್ರಿ ನಿಲ್ಲಿಸಿದ್ದ ರಿಕ್ಷಾವೊಂದು ಮಂಗಳವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿದೆ.

Banner Ad

ಕೇಂದ್ರ ಬಸ್ ನಿಲ್ದಾಣದ ರಿಕ್ಷಾ ಚಾಲಕ ಸಾಜೀದ ಅವರಿಗೆ ಸೇರಿದ ರಿಕ್ಷಾವನ್ನು ಸೋಮವಾರ ರಾತ್ರಿ ಮಸೀದಿ ಸಮೀಪ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ರಿಕ್ಷಾ ಸಂಪೂರ್ಣ ಸುಟ್ಟು ಹೋಗಿದೆ.

ರಿಕ್ಷಾದಲ್ಲಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕ್‌ಗೂ ಬೆಂಕಿ ತಗುಲಿದ್ದರೆ ಪ್ರಾಣಾಪಾಯದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನೆಯಿಂದ ಅಂದಾಜು ₹1.50 ಲಕ್ಷ ನಷ್ಟ ಉಂಟಾಗಿದೆ.

 

 

 

 

 

 

Please Share: