ಕರಾವಳಿ ವಾಯ್ಸ್ ನ್ಯೂಸ್
ಯಲ್ಲಾಪುರ: ಪಟ್ಟಣದ ಸ್ನೇಹ ಸದನ ಹಾಸ್ಟೆಲ್ನಲ್ಲಿ 13 ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.22ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜೋಯಿಡಾ ತಾಲೂಕಿನ ರಾಮನಗರದ ಚರ್ಚ್ ರಸ್ತೆಯ ನಿವಾಸಿ ಡುಮಿಂಗ ಫರ್ನಾಂಡೀಸ್ ಅವರ ಪುತ್ರ ಕ್ರೀಸ್ಟನ್ (13) ಮೃತಪಟ್ಟ ವಿದ್ಯಾರ್ಥಿ. ಈತ ಸ್ನೇಹ ಸದನ ಹಾಸ್ಟೆಲ್ನಲ್ಲಿ ವಾಸವಿದ್ದು, 7ನೇ ತರಗತಿಯಲ್ಲಿ ಓದುತ್ತಿದ್ದನು.
ನ.22ರಂದು ಮಧ್ಯಾಹ್ನ 2.04ರಿಂದ 2.26ರ ನಡುವಿನ ಅವಧಿಯಲ್ಲಿ ಹಾಸ್ಟೆಲ್ನ ಕೊನೆಯ ಮಹಡಿಯ ಮೇಲ್ಛಾವಣಿಯ ತಗಡಿನ ಶೀಟ್ಗೆ ಅಳವಡಿಸಿದ್ದ ರಾಡ್ಗೆ ಕೆಂಪು ಚಾದರ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೃತನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ತಾಯಿ ಜುವಾನಿ ಡುಮಿಂಗ ಫರ್ನಾಂಡೀಸ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರಾಜಶೇಖರ ವಂದಲಿ ತನಿಖೆ ಕೈಗೊಂಡಿದ್ದಾರೆ.


