ಕರಾವಳಿ ವಾಯ್ಸ್ ನ್ಯೂಸ್ 

ಯಲ್ಲಾಪುರ: ಹೈಟೆನ್ಷನ್ ವಿದ್ಯುತ್ ಲೈನ್ ಕೆಳಗೆ ಗಿಡ-ಮರಗಳ ರೆಂಬೆ ಕತ್ತರಿಸುವ ವೇಳೆ ವಿದ್ಯುತ್ ಪ್ರವಹಿಸಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕಣ್ಣಿಗೇರಿ ಗ್ರಾಮದ ತಿಮ್ಮಾಪುರ ಏರಿಯಾದಲ್ಲಿ ಶನಿವಾರರಂದು ನಡೆದಿದೆ.

Banner Ad

ಧಾರವಾಡ ಜಿಲ್ಲೆಯ ಕಲಘಟಗಿಯ ರತ್ನಪ್ಪ ಲಮಾಣಿ (36) ಮೃತಪಟ್ಟ ಕಾರ್ಮಿಕ. ನಾಜಗೇರಿ-ಕೊಡಸೆ ಹೈಪವರ್ ವಿದ್ಯುತ್ ಲೈನ್ ಕೆಳಗೆ ಬೆಳೆದಿದ್ದ ಗಿಡ-ಮರಗಳ ರೆಂಬೆಗಳನ್ನು ಕತ್ತರಿಸುವ ಕೆಲಸದಲ್ಲಿ ರತ್ನಪ್ಪ ಸೇರಿದಂತೆ ಕಾರ್ಮಿಕರು ತೊಡಗಿದ್ದರು. ಈ ವೇಳೆ ಬಿದಿರಿಗೆ ವಿದ್ಯುತ್ ಪ್ರವಹಿಸಿ ರತ್ನಪ್ಪ ಅವರಿಗೆ ಶಾಕ್ ತಗುಲಿ ಮೃತಪಟ್ಟಿದ್ದಾರೆ.

ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಾಮಗ್ರಿಗಳನ್ನು ನೀಡದೆ ಅಪಾಯಕಾರಿ ಕೆಲಸಕ್ಕೆ ನಿಯೋಜಿಸಿದ್ದೇ ಸಾವಿಗೆ ಕಾರಣ ಎಂದು ಆರೋಪಿಸಿ ಮೃತನ ಪತ್ನಿ ಗಿರಿಜಾ ರತ್ನಪ್ಪ ಲಮಾಣಿ ದೂರು ನೀಡಿದ್ದಾರೆ. ಗುತ್ತಿಗೆದಾರ ಅಚ್ಯುತನ್ ಶ್ರೀನಿವಾಸನ್, ಗ್ರಿಡ್ ಮ್ಯಾನೇಜರ್ ಹಾಗೂ ಸೂಪರ್‌ವೈಸರ್ ನಿರ್ಲಕ್ಷ್ಯದ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Please Share: