ಕರಾವಳಿ ವಾಯ್ಸ್ ನ್ಯೂಸ್
ಮಂಗಳೂರು: ಮಕ್ಕಳನ್ನು ಇಳಿಸಲು ನಿಂತಿದ್ದ ರಾಯನ್ ಇಂಟರ್‌ನ್ಯಾಷನಲ್ ಶಾಲೆಯ ವಾಹನಕ್ಕೆ ಖಾಸಗಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಶಾಲಾ ವಾಹನ ಉರುಳಿ ಬಿದ್ದು, ಹಲವು ಮಕ್ಕಳು ಗಾಯಗೊಂಡ ಘಟನೆ ಮಂಗಳೂರಿನ ಪಡುಪಣಂಬೂರು ಬಳಿ ನಡೆದಿದೆ.
ಶಾಲಾ ವಾಹನ ನಿಂತಿದ್ದ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಾಲಾ ವಾಹನ ಉರುಳಿ ಬಿದ್ದಿದೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.


