ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ವತಿಯಿಂದ ಹೃದಯ ತಪಾಸಣಾ ಪ್ಯಾಕೇಜ್ ಅನ್ನು ₹3,000ರ ಬದಲಾಗಿ ಕೇವಲ ₹1,499ಕ್ಕೆ ನೀಡಲಾಗುತ್ತಿದೆ ಎಂದು ಸಂಸ್ಥೆಯ ಶಿವಪ್ರಸಾದ್ ಶೆಟ್ಟಿ ತಿಳಿಸಿದರು.
ಶುಕ್ರವಾರ ಕಾರವಾರ ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಶೇಷ ಪ್ಯಾಕೇಜ್ ಸೆ.30, 2026ರವರೆಗೆ ಲಭ್ಯವಿರಲಿದೆ. ಹೃದಯದ ಸಂಪೂರ್ಣ ತಪಾಸಣೆಯ ಭಾಗವಾಗಿ ECHO/TMT, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೀನ್, ರಾಂಡಮ್ ಬ್ಲಡ್ ಶುಗರ್ (RBS), ECG, ಆಹಾರ ಪದ್ಧತಿ ಕುರಿತು ಸಲಹೆ ಹಾಗೂ ಹೃದ್ರೋಗ ತಜ್ಞರ ಸಮಾಲೋಚನೆ ಒಳಗೊಂಡಿದೆ ಎಂದರು.
ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್ ಹಾಗೂ ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ ಹೊಂದಿರುವವರು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಜತೆಗೆ, ಒತ್ತಡ, ಧೂಮಪಾನ, ಮದ್ಯಪಾನ, ಫಾಸ್ಟ್ಫುಡ್ ಸೇವನೆ, ಜಡ ಜೀವನಶೈಲಿ ಹಾಗೂ ಕಡಿಮೆ ದೈಹಿಕ ಚಟುವಟಿಕೆ ಹೊಂದಿರುವವರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಅತಿಯಾದ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಉಂಟಾಗುವ ನಿದ್ರಾಹೀನತೆ ಹಾಗೂ ಹವಾನಿಯಂತ್ರಿತ ವಾತಾವರಣದಲ್ಲಿ ದೀರ್ಘಕಾಲ ಇರುವುದರಿಂದ ಉಂಟಾಗಬಹುದಾದ ನಿರ್ಜಲೀಕರಣದಂತಹ ಸಮಸ್ಯೆಗಳ ಬಗ್ಗೆಯೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.
ಹೃದಯ ಸಂಬಂಧಿ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಮುನ್ನೆಚ್ಚರಿಕಾ ಆರೈಕೆಯನ್ನು ಉತ್ತೇಜಿಸುವುದು ಈ ವಿಶೇಷ ತಪಾಸಣಾ ಪ್ಯಾಕೇಜ್ನ ಉದ್ದೇಶವಾಗಿದೆ. ತಪಾಸಣೆಗಾಗಿ 72590 16560 ಸಂಖ್ಯೆಗೆ ಕರೆ ಮಾಡಿ ಮುಂಗಡ ಕಾಯ್ದಿರಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು, ಮಹಾವೀರ ಸರ್ಕಲ್, ಪಂಪ್ವೆಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತುರ್ತು ಸೇವೆಗಾಗಿ 0824 222 4444 ಸಂಪರ್ಕಿಸಬಹುದು.


