ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ಮನೆಯ ಪಕ್ಕದ ಶೌಚಾಲಯದ ಕೊಠಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 30 ಲೀಟರ್ ಗೋವಾ ಫೆನ್ನಿ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ ಘಟನೆ ತಾಲೂಕಿನ ತಗ್ಗುಪಾಳ್ಯದಲ್ಲಿ ನಡೆದಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಗ್ಗುಪಾಳ್ಯದಲ್ಲಿ ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ಅವರಿಗೆ ಸೇರಿದ ಮನೆಯ ಪಕ್ಕದ ಶೌಚಾಲಯದಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿ ಹೊಂದಿರುವ ಫೆನ್ನಿ ಮದ್ಯವನ್ನು ದಾಸ್ತಾನು ಮಾಡಲಾಗಿತ್ತು.
ಹೊನ್ನಾವರ ಉಪವಿಭಾಗದ ಅಬಕಾರಿ ನಿರೀಕ್ಷಕಿ ಶಾಂತಾ ಅಪ್ಪಯ್ಯ ತೇರದಾಳ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು 30 ಲೀಟರ್ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ರೆಮಂದಿನ್ ಸಾಂತೋಲಿನ್ ಡಿಕೋಸ್ತಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


