ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಇಲ್ಲಿನ ಟಾಗೋರ್ ಬೀಚ್ ಪ್ರವೇಶದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಮೋಟಾರ್ ಡ್ರೈವಿಂಗ್ ಸ್ಕೂಲ್ ಕಾರಿನ ನಡುವೆ ಗುರುವಾರ ಮುಂಜಾನೆ ಡಿಕ್ಕಿ ಸಂಭವಿಸಿ, ಪಶ್ಚಿಮ ಬಂಗಾಳ ಮೂಲದ ವೈದ್ಯರೊಬ್ಬರು ಗಾಯಗೊಂಡಿದ್ದಾರೆ.

Banner Ad

ಶಾನ್‌ಬಾಗ್ ಮೋಟಾರ್ ಡ್ರೈವಿಂಗ್ ಸ್ಕೂಲ್‌ಗೆ ಸೇರಿದ KA-30-N-1737 ನೋಂದಣಿ ಸಂಖ್ಯೆಯ ಕಾರು ಕಾರವಾರದಿಂದ ಸದಾಶಿವಗಡದ ಕಡೆಗೆ ಸಂಚರಿಸುತ್ತಿತ್ತು. ಇದೇ ಮಾರ್ಗದಲ್ಲಿ ತೆರಳುತ್ತಿದ್ದ WB-71-H-0752 ನೋಂದಣಿ ಸಂಖ್ಯೆಯ ರಾಯಲ್ ಎನ್‌ಫೀಲ್ಡ್ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಘಟನೆ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

 

 

Please Share: