ಕರಾವಳಿ ವಾಯ್ಸ್ ನ್ಯೂಸ್ 

ಬೆಂಗಳೂರು, ಏಪ್ರಿಲ್ 8: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 9ರಂದು ಮಧ್ಯಾಹ್ನ 3.00 ಗಂಟೆಗೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ karresults.nic.in ಹಾಗೂ ಕರ್ನಾಟಕ ಒನ್ ಮೊಬೈಲ್ ಆಪ್ ಮೂಲಕ ಪರಿಶೀಲಿಸಬಹುದು. ಜೊತೆಗೆ, ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಹಾಗೂ ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿ ರವಾನೆಯಾಗಲಿದೆ.

ಈ ಬಾರಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ಡಿಜಿಲಾಕರ್ ಮೂಲಕವೂ ಲಭ್ಯವಾಗಲಿದ್ದು, ಅದೇ ದಿನ ಮಧ್ಯಾಹ್ನ 3 ಗಂಟೆಯಿಂದ digilocker.gov.in ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದೇ ವೇಳೆ, ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಕಾಲೇಜುಗಳಿಗೆ ಕೂಡ ಅದೇ ಸಮಯದಲ್ಲಿ ಲಭ್ಯಗೊಳಿಸಲಾಗುತ್ತದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳು ಫಲಿತಾಂಶ ಪರಿಶೀಲನೆಗಾಗಿ ಅಗತ್ಯ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಮಂಡಳಿ ಮನವಿ ಮಾಡಿದೆ.

 

Please Share: