ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಫುಟ್ಬಾಲ್ ಮೈದಾನದಲ್ಲಿ ತಮ್ಮ ಕೌಶಲ್ಯ, ಶಿಸ್ತು ಹಾಗೂ ತಂಡದ ಸಮನ್ವಯದ ಮೂಲಕ ಗಮನ ಸೆಳೆದ ಕಾರವಾರದ 16 ಕಿರಿಯ ಆಟಗಾರರು ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ.

Banner Ad

ಸೆ.6ರಂದು ಕಾರವಾರದ ಮಾಲಾದೇವಿ ಮೈದಾನದಲ್ಲಿ ಟೈಗರ್ ಐಕೆಎಫ್-ಕೆಎಸ್‌ಎಫ್‌ಎ ನಮ್ಮ ಕರ್ನಾಟಕ ಟ್ರಯಲ್ಸ್ ನಡೆದಿತ್ತು. ಬೋಲ್ಡ್ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಟ್ರಯಲ್ಸ್‌ನಲ್ಲಿ ಕಾರವಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕಿರಿಯ ಆಟಗಾರರು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

2009ರಿಂದ 2011ರ ವಯೋಮಾನದ ವಿಭಾಗದಲ್ಲಿ ಏಡನ್ ಪೆರೇರಾ, ಅಲ್ಮಾನ್ ಅಲಿ ಶೇಖ್, ಫ್ರಾಕ್ಸನ್ ಗೊನ್ಸಾಲ್ವೆಸ್, ಕುಂಗಾ ರಬ್ಟೆನ್, ನ್ಗವಾಂಗ್ ವೋಸಲ್, ಸಮರ್ಥ್ ಬಾಂದೇಕರ್, ಸ್ಟಾರೋನ್ ಗ್ರೇಸಿಸ್ ಹಾಗೂ ಟೆನ್ಜಿನ್ ಟೆಂಕ್ಯೋಂಕ್ ಆಯ್ಕೆಯಾಗಿದ್ದಾರೆ.

2012ರಿಂದ 2013ರ ವಿಭಾಗದಲ್ಲಿ ನಜ್ಮುದ್ದೀನ್ ಮುನಾವರ್, ತಾಶಿ ಎನ್‌ಗೊಯಿಮು, ಟೆನ್ಜಿನ್ ಚೋವಾಂಗ್, ಟೆನ್ಜಿನ್ ಟೋಪ್ಜೋರ್, ಟೆನ್ಜಿನ್ ಯೊಂಡೆನ್ ಹಾಗೂ ಯಶರಾಜ್ ಸಿಂಗ್ ಆಯ್ಕೆಯಾಗಿದ್ದಾರೆ.

2014ರಿಂದ 2016ರ ವಯೋಮಾನದ ವಿಭಾಗದಲ್ಲಿ ಪ್ರತಿಕ್ ರಾಜ್ ಹಾಗೂ ಟೆನ್ಜಿನ್ ತ್ಸೆಸಾಂಗ್ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಆಟಗಾರರು ಫುಟ್ಬಾಲ್ ಕೌಶಲ್ಯದ ಜತೆಗೆ ಶಿಸ್ತು, ತಂಡದ ಸಮನ್ವಯ, ಉತ್ತಮ ವರ್ತನೆ ಹಾಗೂ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಇಂಡಿಯಾ ಖೇಲೋ ಫುಟ್ಬಾಲ್ ಉಪಕ್ರಮದಡಿ ನಡೆದ ಈ ಟ್ರಯಲ್ಸ್, ಕಿರಿಯ ಪ್ರತಿಭೆಗಳಿಗೆ ಮುಂದಿನ ಹಂತದ ಅವಕಾಶ ಕಲ್ಪಿಸಿದೆ.

Please Share: