ಕರಾವಳಿ ವಾಯ್ಸ್ ನ್ಯೂಸ್ 

ಮುಂಡಗೋಡ: ತಾಲೂಕಿನ ಕಾತೂರ ವಲಯದ ರಾಮಾಪುರ ಶಾಖೆಯ ಸಿಂಗನಳ್ಳಿ ಗ್ರಾಮದ ರಾಮು ಗಣೇಶಗೌಡ ಪಾಟೀಲ್ ಅವರ ಮನೆಯೊಳಗೆ ನಾಗರಹಾವು ಸೇರಿಕೊಂಡ ಘಟನೆ ನಡೆದಿದೆ.

Banner Ad

ಮನೆಯೊಳಗೆ ನಾಗರಹಾವು ಕಾಣಿಸಿಕೊಂಡಿರುವ ಬಗ್ಗೆ ಸಂತೋಷ ಸಿಂಗನಳ್ಳಿ ಅವರು ದೂರವಾಣಿ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ನಾಗರಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದರು.

ನಂತರ ಹಾವನ್ನು ಸಮೀಪದ ಕಾಡಿನ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.

ಕಾರ್ಯಾಚರಣೆಯಲ್ಲಿ ಗಸ್ತು ವನಪಾಲಕರಾದ ಎಚ್‌.ಡಿ. ದುಳಮ್ಮನವರ ಹಾಗೂ ವಿರೇಶ್ ಚಂದ್ರಾಪಟ್ಟಣ ಸೇರಿದಂತೆ ಗ್ರಾಮಸ್ಥರಾದ ಸಂತೋಷ ಸಿಂಗನಳ್ಳಿ, ಪರಶು ಅಲಳ್ಳಿ, ರಾಮು ಗಣೇಶ ಪಾಟೀಲ್, ರಾಜು ಶೇಟ್, ಶಂಭು ಪಾಟೀಲ್, ಶಿವಾಜಿ ಪಾಟೀಲ್, ವಿಠ್ಠಲ್ ಆಳಳ್ಳಿ, ಮಾನತೇಶ ಪಾಟೀಲ್ ಹಾಗೂ ನಾಗರಾಜ ಖಂಡಪ ಪಾಟೀಲ್ ಉಪಸ್ಥಿತರಿದ್ದರು.

ಹಾವು ಕಂಡುಬಂದಾಗ ಭಯಪಡದೆ, ಅದನ್ನು ಹಿಡಿಯಲು ಸ್ವತಃ ಮುಂದಾಗದೆ ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಯಿತು.

 

 

 

Please Share: