ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ತಾಲೂಕಿನ ದೇವಸ್ಥಾನಕೇರಿ ಪ್ರದೇಶದ ಮನೆಯಲ್ಲಿ ಸುಮಾರು ₹13.30 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳುವಾದ ಘಟನೆ ವರದಿಯಾಗಿದ್ದು, ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನಕೇರಿ ನಿವಾಸಿ ಪಾರ್ವತಿ ನಾರಾಯಣ ಪಟಗಾರ (35) ಅವರು ನೀಡಿದ ದೂರಿನ ಪ್ರಕಾರ, ಮೇ 20ರ ರಾತ್ರಿ 8 ಗಂಟೆಯಿಂದ ಜೂನ್ 7ರ ಸಂಜೆ 6 ಗಂಟೆಯ ನಡುವೆ ಅವರ ಮನೆಯಲ್ಲಿದ್ದ ಕಬ್ಬಿಣದ ಟ್ರಂಕ್ನೊಳಗಿನ ಬೀಗ ಹಾಕಿದ್ದ ಬಾಕ್ಸ್ನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳುವಾಗಿದೆ.
ಕಳುವಾದ ವಸ್ತುಗಳಲ್ಲಿ 40 ಗ್ರಾಂ ತೂಕದ ಕರಿಮಣಿ ಮಂಗಳಸೂತ್ರ, 15 ಗ್ರಾಂ ತೂಕದ ಮತ್ತೊಂದು ಕರಿಮಣಿ ಮಂಗಳಸೂತ್ರ, 20 ಗ್ರಾಂ ಚಿನ್ನದ ನೆಕ್ಲೆಸ್, 35 ಗ್ರಾಂ ಹವಳದ ಸರ, ಮಕ್ಕಳ ಚಿನ್ನದ ಚೈನ್ಗಳು ಹಾಗೂ ಐದು ಚಿಕ್ಕ ಚಿನ್ನದ ಉಂಗುರಗಳು ಸೇರಿ ಒಟ್ಟು 128 ಗ್ರಾಂ ಚಿನ್ನಾಭರಣಗಳಿದ್ದು, ಅವುಗಳ ಮೌಲ್ಯ ಸುಮಾರು ₹12.80 ಲಕ್ಷ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ₹50,000 ನಗದು ಹಣವೂ ಕಳುವಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕಳ್ಳತನ ಪ್ರಕರಣದಲ್ಲಿ ದೇವಸ್ಥಾನಕೇರಿ ನಿವಾಸಿ ಧನುಶ್ ಶ್ರೀಧರ ಗೌಡ ಎಂಬ ಯುವಕನ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಆತನನ್ನು ವಿಚಾರಣೆ ನಡೆಸಿ ಕಳುವಾದ ಚಿನ್ನಾಭರಣ ಹಾಗೂ ನಗದು ಪತ್ತೆಹಚ್ಚುವಂತೆ ಅವರು ಮನವಿ ಮಾಡಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿರಿ
