ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಗುರುವಾರ ನಗರದ ಗಣಪತಿ ದೇವಾಲಯ ಹಾಗೂ ಸದಾಶಿವಗಡ ದುರ್ಗಾದೇವಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

Banner Ad

ನಗರ ಮಂಡಲದ ವತಿಯಿಂದ ಕಾರವಾರ ನಗರದ ಗಣಪತಿ ದೇವಸ್ಥಾನದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ್ ಅವರು ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಿ ಮೋದಿ ಅವರ ಉಜ್ವಲ ಭವಿಷ್ಯ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು.

 

ಇದೇ ವೇಳೆ ಗ್ರಾಮೀಣ ಮಂಡಲದ ವತಿಯಿಂದ ಸದಾಶಿವಗಡದ ದುರ್ಗಾದೇವಿ ದೇವಸ್ಥಾನದಲ್ಲಿ ರೂಪಾಲಿ ನಾಯ್ಕ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರಧಾನಿ ಮೋದಿ ಅವರ ಜನಸೇವಾ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ಮಾಜಿ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಕಿಶನ್ ಕಾಂಬ್ಳೆ, ಸುನಿಲ್ ಸೋನಿ, ವಿ.ಎಂ. ಹೆಗಡೆ, ವೈಶಾಲಿ ತಾಂಡೆಲ್, ಅಭಿಷೇಕ್ ಹರಿಕಾಂತ, ಸೂರಜ್ ದೇಸಾಯಿ, ಸುಜಾತಾ ಬಾಂದೇಕರ್, ಸ್ವಾತಿ ದೇಸಾಯಿ ಪಾಲ್ಗೊಂಡಿದ್ದರು.

ಗ್ರಾಮೀಣ ಮಂಡಲದಿಂದ ಸೂರಜ್ ದೇಸಾಯಿ, ಸುಜಾತಾ ಬಾಂದೇಕರ್, ಸ್ವಾತಿ ದೇಸಾಯಿ, ಮಾರುತಿ ದುದಾಳ್ಕರ್, ಪುನೀತ್ ಕಲ್ಗುಟ್ಕರ್, ದಿಲೀಪ್ ಗಜೀನ್ ಕರ್, ಉದಯ ಕಲ್ಗುಟ್ಕರ್, ಸಂತೋಷ್ ಪವಾರ್, ಗ್ರಾಮ ಪಂಚಾಯತಿಯ ಮಾಜಿ ಸದಸ್ಯರು, ಪ್ರಮುಖರು, ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

 

Please Share: