ಕರಾವಳಿ ವಾಯ್ಸ್ ನ್ಯೂಸ್
ಪಣಜಿ: ಗೋವಾದ ಮಡಗಾoವ್ ದಿಂದ ಕುಮಟಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಾಣಕೋಣ ಬೈಪಾಸ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಈ ಘಟನೆಗೆ ಲಭ್ಯವಾಗಿರುವ ಮಾಹಿತಿಯ ಅನುಸಾರ _ಮಂಗಳವಾರ ಮಧ್ಯಾಹ್ನ ಗೋವಾದ ಮಡಗಾವ್ ದಿಂದ ಕುಮಟಾ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಕಾಣಕೋಣ ಬೈಪಾಸ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಬೆಟ್ಟಕ್ಕೆ ನುಗ್ಗಿದೆ.
ಈ ಬಸ್ ನಲ್ಲಿ ಕೇವಲ ನಾಲ್ಕು ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಯಾವುದೇ ಪ್ರಯಾಣಿಕರಿಗಾಗಲಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ರಿಗೆ ಯಾವುದೇ ಗಾಯಗಳಾಗಿಲ್ಲ.


