ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: 110/11 ಕೆ.ವಿ. ಶಿರಸಿ ಉಪಕೇಂದ್ರದಲ್ಲಿ ಬನವಾಸಿ, ಸುಗಾವಿ ಹಾಗೂ ತಾರಗೋಡ ಫೀಡರ್‌ಗಳ ಜಿಒಎಸ್ ಬದಲಾವಣೆ ಕಾಮಗಾರಿ ಮತ್ತು ಗಣೇಶ ಚತುರ್ಥಿ ಪ್ರಯುಕ್ತ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.3ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಈ ಅವಧಿಯಲ್ಲಿ ಶಿರಸಿ ನಗರದಾದ್ಯಂತ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಅಲ್ಲದೆ, 110/11 ಕೆ.ವಿ. ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖಂಡ ಹಾಗೂ ತಾರಗೋಡ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ನಿಗದಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ವಿದ್ಯುತ್ ಸರಬರಾಜನ್ನು ಅದಕ್ಕೂ ಮೊದಲೇ ಪುನರಾರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೆಸ್ಕಾಂನೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನಾ ಉಪವಿಭಾಗ, ಹೆಸ್ಕಾಂ, ಶಿರಸಿ ತಿಳಿಸಿದ್ದಾರೆ.


