ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣದ ಹಿನ್ನೆಲೆ ಬಂಧನಕ್ಕೊಳಗಾದ ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಅವರೊಡನೆ ಹೆಸರು ಕೇಳಿಬಂದ ಸುಚಿತ್ರಾ ಕುರಿತು ಹೊಸ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದಲ್ಲಿ ಇಬ್ಬರೂ ಜೈಲು ಸೇರಿದ್ದು, ಇದೀಗ ಜೈಲಿನೊಳಗಿನ ಕೆಲ ಸಂಗತಿಗಳು ಚರ್ಚೆಗೆ ಕಾರಣವಾಗಿವೆ.

ಜೈಲಿನಲ್ಲೂ ಜ್ಯೋತಿಷ್ಯ ಮುಂದುವರಿದಿತೇ?

ಜೈಲಿನಲ್ಲಿರುವ ಕಮಲಾಕರ್ ಭಟ್ ಕೈದಿಗಳಿಗೆ ಜ್ಯೋತಿಷ್ಯ ಹೇಳಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವರು ಹೇಳುವ ಪ್ರಕಾರ, ಅವರು “ವಶೀಕರಣ ತಂತ್ರ” ತಿಳಿದಿದ್ದೇನೆ ಎಂದು ಹೇಳಿ ಕೈದಿಗಳ ಗಮನ ಸೆಳೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಜೈಲು ಸಿಬ್ಬಂದಿಯವರಿಗೂ ಭವಿಷ್ಯ ಹೇಳುವುದಾಗಿ ಹೇಳಿ ಮಾತುಕತೆ ನಡೆಸಲು ಪ್ರಯತ್ನಿಸಿದ್ದಾರಂತೆ.

ಜೈಲರ್‌ ಗದರಿಕೆ

ಒಮ್ಮೆ ಜೈಲರ್ ಅವರ ಬಳಿಗೂ ಹೋಗಿ “ನಿಮ್ಮ ಭವಿಷ್ಯ ಹೇಳುತ್ತೇನೆ” ಎಂದು ಹೇಳಿದಾಗ, “ನಿನ್ನ ಭವಿಷ್ಯ ನಿನಗೇ ಗೊತ್ತಿದ್ದರೆ ಇಲ್ಲಿ ಏಕೆ ಬಂದಿದ್ದೆ?” ಎಂದು ತಿರುಗೇಟು ನೀಡಿದರೆಂಬ ಮಾತುಗಳು ಹರಿದಾಡುತ್ತಿವೆ. ಬಳಿಕ ಈ ವಿಚಾರಕ್ಕೆ ತೆರೆ ಬಿದ್ದಿದೆ ಎನ್ನಲಾಗುತ್ತಿದೆ.

ಹನಿಟ್ರ್ಯಾಪ್ ಆರೋಪ

ಸೋಶಿಯಲ್ ಮೀಡಿಯಾದಲ್ಲಿ ಚಿರಪರಿಚಿತವಾಗಿದ್ದ ಸುಚಿತ್ರಾ ಯುವಕರನ್ನು ಪರಿಚಯ ಮಾಡಿಕೊಂಡು ಖಾಸಗಿ ಕ್ಷಣಗಳ ವಿಡಿಯೋ ಮೂಲಕ ಬೆದರಿಕೆ ಹಾಕುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಖಾಸಗಿ ದೃಶ್ಯಗಳನ್ನು ಆಧಾರವಾಗಿಸಿಕೊಂಡು ಹಣದ ಒತ್ತಡ ತರುತ್ತಿದ್ದಳು ಎಂಬ ಮಾತುಗಳು ತನಿಖಾ ವಲಯದಲ್ಲಿ ಕೇಳಿಬರುತ್ತಿವೆ.

ಕಮಲಾಕರ್ ಭಟ್ ಮೇಲೂ ಒತ್ತಡವಿತ್ತೇ?

ಕೆಲ ಮೂಲಗಳ ಪ್ರಕಾರ, ಕಮಲಾಕರ್ ಭಟ್ ಜೊತೆಗಿನ ಖಾಸಗಿ ವಿಡಿಯೋವನ್ನು ಬಳಸಿಕೊಂಡು ಸುಚಿತ್ರಾ ಅವರನ್ನು ಕೂಡ ತನ್ನ ಜೊತೆಯಲ್ಲೇ ಇರಲು ಒತ್ತಾಯಿಸಿದ್ದಾಳೆ ಎನ್ನಲಾಗಿದೆ. “ನನ್ನನ್ನು ಬಿಟ್ಟು ಹೋದರೆ ವಿಡಿಯೋ ಹೊರಗೆ ಬಿಡುತ್ತೇನೆ” ಎಂಬ ಬೆದರಿಕೆ ಇತ್ತು ಎಂಬ ಆರೋಪವೂ ಕೇಳಿಬರುತ್ತಿದೆ. ಈ ಕಾರಣದಿಂದಲೇ ಇಬ್ಬರೂ ಒಟ್ಟಿಗೆ ಇದ್ದರು ಎನ್ನುವ ಚರ್ಚೆ ನಡೆಯುತ್ತಿದೆ.

ಕೋಟಿ ಆಸ್ತಿ ವಿಚಾರ

ಒಂದು ಆಡಿಯೋ ಸಂಭಾಷಣೆಯಲ್ಲಿ, ಸುಚಿತ್ರಾಳಿಗಾಗಿ 50 ರಿಂದ 100 ಕೋಟಿ ಮೌಲ್ಯದ ಆಸ್ತಿ ಮಾಡಿದ್ದೇನೆ ಎಂದು ಕಮಲಾಕರ್ ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಹರಿದಾಡುತ್ತಿದೆ. “ಅವಳಿಗಾಗಿ ಏನಾದರೂ ಮಾಡುತ್ತೇನೆ” ಎಂಬ ಮಾತುಗಳೂ ಕೇಳಿಬಂದಿವೆ ಎನ್ನಲಾಗಿದೆ. ಈ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಜನರಲ್ಲಿ ಕುತೂಹಲ ಮತ್ತು ಆಕ್ರೋಶ ಹುಟ್ಟಿಸಿದೆ.

ಆಡಿಯೋ ಕ್ಲಿಪ್ ವಿವಾದ

ಇವರಿಬ್ಬರ ಮಾತುಕತೆಯ ಆಡಿಯೋ ಕ್ಲಿಪ್‌ನಲ್ಲಿ ಅನೈತಿಕ ಸಂಬಂಧದ ಸೂಚನೆಗಳು, ಕಠಿಣ ಪದಗಳ ಬಳಕೆ ಹಾಗೂ ಆತಂಕ ಹುಟ್ಟಿಸುವ ಮಾತುಗಳು ಕೇಳಿಬರುತ್ತಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಮಕ್ಕಳ ಕುರಿತು ಕೂಡ ವಿವಾದಾತ್ಮಕ ಮಾತುಗಳಿವೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತನಿಖೆ ಮುಂದುವರಿಕೆ

ಪ್ರಕರಣ ಈಗಾಗಲೇ ಸಂವೇದನಾಶೀಲವಾಗಿದ್ದು, ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆಡಿಯೋ ಮತ್ತು ವಿಡಿಯೋಗಳ ನೈಜತೆ, ಆರೋಪಗಳ ಸತ್ಯಾಸತ್ಯತೆ ಎಲ್ಲವೂ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

Please Share: