ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ ಮಾರಿಕಾಂಬಾ ಸೀನಿಯರ್ ಚೇಂಬರ್ ಇಂಟರ್ನ್ಯಾಶನಲ್ ಲೆಜಿನ್ ವತಿಯಿಂದ ಸೀನಿಯರ್ ಚೇಂಬರ್ ಓರಿಯಂಟೇಶನ್ ತರಬೇತಿ ಕಾರ್ಯಕ್ರಮ ನಡೆಯಿತು.
ಕುಮಟಾ ಕೆನರಾ ಸೀನಿಯರ್ ಚೇಂಬರ್ ಲೆಜಿನ್ನ ಪ್ರೊವಿಷನಲ್ ತರಬೇತುದಾರರಾದ ಸೀನಿಯರ್ ಎನ್.ಆರ್. ಗಜು, ಸೀನಿಯರ್ ಗಣೇಶ ಭಟ್ ಹಾಗೂ ಸೀನಿಯರ್ ರಾಮದಾಸ ಗುನಗಿ ತರಬೇತಿ ನೀಡಿದರು. ಸೀನಿಯರ್ ಚೇಂಬರ್ನ ಧ್ಯೇಯ, ಉದ್ದೇಶ, ಸಂಘಟನೆಯ ಕಾರ್ಯವೈಖರಿ ಹಾಗೂ ಸದಸ್ಯರ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.

ಮಾರಿಕಾಂಬಾ ಸೀನಿಯರ್ ಚೇಂಬರ್ ಅಧ್ಯಕ್ಷೆ ಸೀನಿಯರ್ ಮಂಗಳಗೌರಿ ನೆಜ್ಜೂರು ಅಧ್ಯಕ್ಷತೆ ವಹಿಸಿ, ಓರಿಯಂಟೇಶನ್ ತರಬೇತಿಯ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಉಪಾಧ್ಯಕ್ಷ ಕುಮಾರ ವಿ. ಕರ್ಸೆ ಅವರು ತರಬೇತುದಾರರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕುಮಟಾ ಚೇಂಬರ್ನ ಸೀನಿಯರ್ ಶೈಲಾ ಗುನಗಿ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಸಹಸಂಚಾಲಕ ಸೀನಿಯರ್ ಅನಿಲ್ ಕಾರಿ, ಕಾರ್ಯದರ್ಶಿ ಸೀನಿಯರ್ ಅರ್ಚನಾ ಹೆಗಡೆ, ಖಜಾಂಚಿ ಸೀನಿಯರ್ ಗೋಪಾಬಾಲಿ ಹೆಗಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸದಸ್ಯರಲ್ಲಿ ಸಂಘಟನೆಯ ಕಾರ್ಯವೈಖರಿ ಕುರಿತು ಅರಿವು ಮೂಡಿಸುವುದರೊಂದಿಗೆ ಸಂಘಟನಾ ಬದ್ಧತೆ ಹಾಗೂ ಸೇವಾ ಮನೋಭಾವವನ್ನು ಬಲಪಡಿಸಲು ಸಹಕಾರಿಯಾಯಿತು.



