ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಕರ್ನಾಟಕ ಸರ್ಕಾರದ 2024ನೇ ಬ್ಯಾಚ್‌ನ ಐಎಎಸ್ ಅಧಿಕಾರಿಗಳನ್ನು ವಿವಿಧ ಉಪವಿಭಾಗಗಳ ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಆದೇಶ ಹೊರಡಿಸಿದೆ.

Banner Ad

ಆದೇಶದಂತೆ ರಮ್ಯಾ ಆರ್., ಐಎಎಸ್ (KN:2024) ಅವರನ್ನು ಕಾರವಾರ ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿ ತಕ್ಷಣದಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಮುಂದುವರಿಯಲಿದೆ.

ಕಾರವಾರ ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಲಾಂ ಹುಸೇನ್, ಕೆಎಎಸ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ರಮ್ಯಾ ಆರ್. ಅವರನ್ನು ನೇಮಕ ಮಾಡಲಾಗಿದೆ.

ಇದೇ ಆದೇಶದಡಿ ಪುನ್ರಾಜ್ ಸಿಂಗ್ ಸೋಲಂಕಿ ಅವರನ್ನು ಚಿಕ್ಕಮಗಳೂರು, ರಿತಿಕಾ ವರ್ಮಾ ಅವರನ್ನು ಕಲಬುರಗಿ, ಜುಫಿಶಾನ್ ಹಕ್ ಅವರನ್ನು ವಿಜಯಪುರ, ಅಭಿನವ್ ಜೈನ್ ಅವರನ್ನು ಬೀದರ್, ಖೋಡೆ ಸಮೀರ್ ಪ್ರಕಾಶ್ ಅವರನ್ನು ಸವಣೂರು ಹಾಗೂ ನಾಗೇಂದ್ರ ಬಾಬು ಕುಮಾರ್ ಅವರನ್ನು ಲಿಂಗಸುಗೂರು ಉಪವಿಭಾಗಗಳ ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

Please Share: