ಕರಾವಳಿ ವಾಯ್ಸ್ ನ್ಯೂಸ್
ಗೋವಾ: ಉತ್ತರ ಗೋವಾದ ಬಾಗಾ ಬೀಚ್ ಸಮೀಪದ ಅರ್ಪೋರಾ ಪ್ರದೇಶದಲ್ಲಿರುವ ನೈಟ್ ಕ್ಲಬ್‌ನಲ್ಲಿ ಶನಿವಾರ ರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿ 23 ಮಂದಿ ಜೀವಂತವಾಗಿ ಸುಟ್ಟು ಮೃತಪಟ್ಟಿದ್ದಾರೆ.
ಮಧ್ಯರಾತ್ರಿ ವೇಳೆ ಕ್ಲಬ್ ಒಳಭಾಗದಲ್ಲಿ ಅಕಸ್ಮಿಕವಾಗಿ ಬೆಂಕಿ ಚಿಮ್ಮಿದ್ದು, ಕ್ಷಣಾರ್ಧದಲ್ಲಿ ಅಗ್ನಿಜ್ವಾಲೆಗಳು ವ್ಯಾಪಿಸಿದವು. ಪ್ರಾಥಮಿಕ ಮಾಹಿತಿಯ ಪ್ರಕಾರ ಅಡುಗೆಮನೆಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟವೇ ಬೆಂಕಿ ಹರಡುವ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಈ ಅವಘಡದಲ್ಲಿ ಕ್ಲಬ್ ಸಿಬ್ಬಂದಿ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ನಿಯಂತ್ರಿಸಲು ಹಲವು ಅಗ್ನಿಶಾಮಕ ದಳಗಳ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಬೆಳಗಿನ ಜಾವದವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಟ್ಟಡದಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿತ್ತೇ? ಬೆಂಕಿ ಉಂಟಾಗಲು ಖಚಿತ ಕಾರಣವೇನು? ಎಂಬುದರ ಬಗ್ಗೆ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆ ಸಂಯುಕ್ತ ತನಿಖೆ ಆರಂಭಿಸಿದೆ.
ಅರ್ಧರಾತ್ರಿ ಮೋಜಿನ ಪಾರ್ಟಿ ನಡೆದ ಸ್ಥಳವೇ ಕ್ಷಣಾರ್ಧದಲ್ಲಿ ದಹನಕ್ಕೆ ಕಾರಣವಾಗಿರುವ ದುರ್ಘಟನೆ ಗೋವಾದ ಪ್ರವಾಸೋದ್ಯಮ ವಲಯಕ್ಕೆ ಬೆಚ್ಚಿಬೀಳುವಂತಹದಾಗಿದೆ.

