ಕರಾವಳಿ ವಾಯ್ಸ್ ನ್ಯೂಸ್
ಮುಂಡಗೋಡ: ಶಿರಸಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕ್ಷಣಾರ್ಧದಲ್ಲಿ ಆತಂಕದ ವಾತಾವರಣ ಉಂಟಾಯಿತು. ಬಸ್ ಮಳಗಿ ಬಸ್ ಸ್ಟ್ಯಾಂಡ್ ಬಳಿ ಬಂದಾಗ ಸ್ಟೇರಿಂಗ್ ಕಟ್ಟಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನೇರವಾಗಿ ಗಟಾರಕ್ಕೆ ಇಳಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ!
ಅಪಘಾತದ ವೇಳೆ ಬಸ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಬಸ್ ಗಟಾರದಲ್ಲಿ ನಿಂತ ಕ್ಷಣ ಪ್ರಯಾಣಿಕರು ತಾವು ಜೀವಂತವಾಗಿದ್ದೇವೆ ಎಂಬ ಅರಿವಿಗೆ ಬಂದು ಉಸಿರು ಬಿಟ್ಟರು. ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಸ್ಥಳದಲ್ಲಿ ಜನಸಮೂಹ ಜಮಾಯಿಸಿ ಕ್ಷಣಕಾಲ ಆತಂಕ ಸೃಷ್ಟಿಯಾಯಿತು. ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಬಸ್ ಪಲ್ಟಿಯಾಗದೆ ನಿಂತದ್ದೇ ದೊಡ್ಡ ಅದೃಷ್ಟ ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ‘ಜೀವಿತಾವಧಿಯೇ ಕಣ್ಣ ಮುಂದೆ ಓಡಿಹೋದಂತೆ ಆಯ್ತು!’ ಎಂದು ಘಟನೆಯಲ್ಲಿ ಪಾರಾದೊಬ್ಬ ಪ್ರಯಾಣಿಕನ ಆತಂಕಭರಿತ ಹೇಳಿಕೆ.
ಮಳಗಿಯ ಬಳಿ ನಡೆದ ಈ ಅಪಘಾತ ಇದೀಗ ಊರಿನ ಮಾತುಕತೆಯಾಗಿ ಮಾರ್ಪಟ್ಟಿದೆ!


