ಕಾರವಾರ: ತಾಲೂಕಿನ ದೇವಳಮಕ್ಕಿ ನಿರ್ಮಿತಿ ಪಾರ್ಕ್ ಬಳಿ ಭಾನುವಾರ ಬೆಳಗ್ಗೆ ಭಾರಿ ಆತಂಕ ಮೂಡಿಸಿದ ಘಟನೆ ನಡೆದಿದೆ. ಜನ ವಸತಿ ಪ್ರದೇಶಕ್ಕೆ ಅಚ್ಚರಿ ಮೂಡಿಸುವಂತೆ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ನುಗ್ಗಿದ್ದು, ಸ್ಥಳೀಯರಲ್ಲಿ ಭಯ-ಆಶ್ಚರ್ಯಕ್ಕೆ ಕಾರಣವಾಯಿತು.
ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕಾರವಾರದ ಆರ್ಎಫ್ಒ ಕಿರಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವೃತ್ತಿಪರ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಸುಮಾರು ನಾಲ್ಕು ವರ್ಷ ಪ್ರಾಯದ ಈ ಬೃಹತ್ ಕಾಳಿಂಗವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದರು.
ಕಾಳಿಂಗ ಸರ್ಪದ ಅಚಾನಕ್ ದರ್ಶನವು ಜನರಲ್ಲಿ ಕೆಲ ಕ್ಷಣ ಗಾಬರಿಯನ್ನುಂಟು ಮಾಡಿದರೆ, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿದೆ.


