ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಜುಲೈ 2026ರ ‘Cop of the Month’ ಗೌರವಕ್ಕೆ ಜಿಲ್ಲೆಯ ವಿವಿಧ ವಿಭಾಗಗಳ 23 ಪೊಲೀಸ್ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಕರ್ತವ್ಯದಲ್ಲಿ ಉತ್ತಮ ಕಾರ್ಯ, ಆರೋಪಿತರ ಪತ್ತೆ, ತನಿಖಾ ಸಹಾಯ, ಬಂದೋಬಸ್ತ್, ಸಂಚಾರ ನಿಯಂತ್ರಣ, ಗಸ್ತು ಹಾಗೂ ತುರ್ತು ಸೇವೆಯಲ್ಲಿ ಸಲ್ಲಿಸಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಸಿಬ್ಬಂದಿಯನ್ನು ಗುರುತಿಸಲಾಗಿದೆ.
ಕಾರವಾರ ಉಪವಿಭಾಗದಲ್ಲಿ ಎಎಸ್‌ಐ ರುದ್ರೇಶ ಮೇತ್ರಣಿ (ಕಾರವಾರ ಶಹರ), ಹೆಡ್ ಕಾನ್‌ಸ್ಟೆಬಲ್ ವಿವೇಕಾನಂದ ಪಟಗಾರ (ಕಾರವಾರ ಗ್ರಾಮೀಣ), ಸಿಪಿಸಿ ಹನುಮಂತ ಎಂ. ಸರಿಕರ (ಕಾರವಾರ ಗ್ರಾಮೀಣ) ಹಾಗೂ ಹೋಮ್ ಗಾರ್ಡ್ ಅಶೋಕ ತಳೇಕರ (ಕಾರವಾರ ಶಹರ) ಆಯ್ಕೆಯಾಗಿದ್ದಾರೆ.
ಭಟ್ಕಳ ಉಪವಿಭಾಗದಲ್ಲಿ ಎಎಸ್‌ಐ ಪರಮೇಶ್ವರ ಮಾಳಸೆಕರ (ಮಂಕಿ), ಹೆಡ್ ಕಾನ್‌ಸ್ಟೆಬಲ್ ಗೋರಕನಾಥ ರಾಣೆ (ಗೋಕರ್ಣ), ಸಿಪಿಸಿ ವಿನೋದ ರೆಡ್ಡಿ (ಭಟ್ಕಳ ಗ್ರಾಮೀಣ) ಹಾಗೂ ಹೋಮ್ ಗಾರ್ಡ್ ರವೀಂದ್ರ ನಾಯ್ಕ (ಭಟ್ಕಳ ಶಹರ) ಗೌರವಕ್ಕೆ ಪಾತ್ರರಾಗಿದ್ದಾರೆ.
ಶಿರಸಿ ಉಪವಿಭಾಗದಲ್ಲಿ ಎಎಸ್‌ಐ ಸೋಮಶೇಖರ ಮೇತ್ರಿ (ಮುಂಡಗೋಡ), ಹೆಡ್ ಕಾನ್‌ಸ್ಟೆಬಲ್ ಗಣಪತಿ ಪಟಗಾರ (ಶಿರಸಿ ಗ್ರಾಮೀಣ), ಸಿಪಿಸಿ ಮಹಾವೀರ ಡಿ.ಎಸ್. (ಯಲ್ಲಾಪುರ) ಹಾಗೂ ಹೋಮ್ ಗಾರ್ಡ್ ಶಂಕರ ಮೂರ್ತಿ ನಾಯ್ಕ (ಬನವಾಸಿ) ಆಯ್ಕೆಯಾಗಿದ್ದಾರೆ.
ದಾಂಡೇಲಿ ಉಪವಿಭಾಗದಲ್ಲಿ ಎಎಸ್‌ಐ ಸಂತ್ರಾಮ ಕಾಂಬಳೆ (ದಾಂಡೇಲಿ ಗ್ರಾಮೀಣ), ಹೆಡ್ ಕಾನ್‌ಸ್ಟೆಬಲ್ ನಾಮದೇವ ಕಂಕಾಳಿ (ರಾಮನಗರ), ಸಿಪಿಸಿ ಸುರೇಶ ಗಜಬರ (ರಾಮನಗರ) ಹಾಗೂ ಹೋಮ್ ಗಾರ್ಡ್ ಬಾಲಕೃಷ್ಣ ಮುಖಾಶಿ(ಹಳಿಯಾಳ) ಗುರುತಿಸಲ್ಪಟ್ಟಿದ್ದಾರೆ.
ಡಿಎಆರ್ ವಿಭಾಗದಲ್ಲಿ ಎಆರ್‌ಎಸ್‌ಐ ವಿನೋದ ಬಾಂದೇಕರ್, ಹೆಡ್ ಕಾನ್‌ಸ್ಟೆಬಲ್ ಸಂಜೀವ ನಾಯ್ಕ, ಹೆಡ್ ಕಾನ್‌ಸ್ಟೆಬಲ್ ಗೋಪಾಲಕೃಷ್ಣ ನಾಯಕ ಹಾಗೂ ಎಪಿಸಿ ಅಮಜ್ದಾಖಾನ ಖಾಜಿ ಅವರು ವಿವಿಧ ಕರ್ತವ್ಯಗಳಿಗಾಗಿ ಆಯ್ಕೆಯಾಗಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿ, ಕಾರವಾರದ ERSS-112 ವಿಭಾಗದಲ್ಲಿ ಸಿಎಚ್‌ಸಿ ಸಚಿನ್ ನಾಯಕ, ಎಚ್ ಸಿ ರಫೀಕ ಹಿರೇಮನಿ ಹಾಗೂ ಎಪಿಸಿ ವಿಘ್ನೇಶ ತಾಂಡೇಲ ಅವರು ತುರ್ತು ಸೇವೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ‘Cop of the Month’ ಗೌರವಕ್ಕೆ ಪಾತ್ರರಾಗಿದ್ದಾರೆ.
ಒಟ್ಟು 23 ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವತಿಯಿಂದ ಜುಲೈ ತಿಂಗಳ ‘Cop of the Month’ ಗೌರವ ನೀಡಿ ಅಭಿನಂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎಂ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

