ಕರಾವಳಿ ವಾಯ್ಸ್ ನ್ಯೂಸ್ 

Banner Ad

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಸಮೀಪ ಆಹಾರ ಅರಸಿ ಕಾಡಿನಿಂದ ಬಂದಿದ್ದ ಜಿಂಕೆಯ ಮೇಲೆ ಬೀದಿ ಶ್ವಾನಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಸನವಳ್ಳಿ ಗ್ರಾಮದ ಯೋಗಿ ಎಂಬುವವರ ಜಮೀನಿಗೆ ಕಾಡಿನಿಂದ ಆಹಾರ ಅರಸಿ ಬಂದಿದ್ದ ಜಿಂಕೆ ಹೊಲದಲ್ಲಿ ಓಡಾಡುತ್ತಿದ್ದ ವೇಳೆ ನಾಲ್ಕೈದು ಬೀದಿ ಶ್ವಾನಗಳು ಅದನ್ನು ಬೆನ್ನಟ್ಟಿ ದಾಳಿ ನಡೆಸಿವೆ.

ಶ್ವಾನಗಳು ಜಿಂಕೆಯ ಮೇಲೆ ದಾಳಿ ನಡೆಸುತ್ತಿರುವುದನ್ನು ಗಮನಿಸಿದ ಗದ್ದೆ ಮಾಲೀಕ ಹಾಗೂ ಸ್ಥಳೀಯರು ಕೂಡಲೇ ಧಾವಿಸಿ ಜಿಂಕೆಯನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಶ್ವಾನಗಳ ತೀವ್ರ ದಾಳಿಯಿಂದ ಜಿಂಕೆ ಮೃತಪಟ್ಟಿದೆ.

ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುವೈದ್ಯ ಡಾ. ಜಯಚಂದ್ರ ಸ್ಥಳಕ್ಕೆ ಆಗಮಿಸಿ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.

ಈ ಸಂದರ್ಭದಲ್ಲಿ ರಾಜು ಗುಬ್ಬಕನವರ, ಶಂಕ್ರಪ್ಪ ಕೆರಿಹೊಲದವರ, ದೇವರಾಜ ಕಳಸಗೇರಿ, ವಾಚರ್ ಹಸನಸಾಬ, ರುದ್ರಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

 

Please Share: