ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟುಹೋದ ₹2 ಲಕ್ಷ ನಗದು ಇದ್ದ ಬ್ಯಾಗ್‌ನ್ನು ಮರಳಿ ಅವರಿಗೆ ಹಸ್ತಾಂತರಿಸುವ ಮೂಲಕ ಬಸ್ಸಿನ ನಿರ್ವಾಹಕ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

Banner Ad

ಅಂಕೋಲಾ ಘಟಕದ ಕುಮಟಾ–ಕೊಲ್ಲಾಪುರ ಸಾರಿಗೆ ಬಸ್ಸಿನಲ್ಲಿ ಬೀಡಿಯಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಬೆಳಗಾವಿಯಲ್ಲಿ ಇಳಿಯುವಾಗ ₹2 ಲಕ್ಷ ಹಣವಿದ್ದ ಬ್ಯಾಗ್‌ನ್ನು ಬಸ್ಸಿನಲ್ಲಿಯೇ ಮರೆತು ತೆರಳಿದ್ದರು. ಇದನ್ನು ಗಮನಿಸಿದ ಬಸ್ಸಿನ ನಿರ್ವಾಹಕ ಅಶೋಕ್ ಚವ್ಹಾಣ್ ಹಾಗೂ ಚಾಲಕ ವೆಂಕಟೇಶ ಗುನಗ ಅವರು ಬ್ಯಾಗ್‌ನ್ನು ಸುರಕ್ಷಿತವಾಗಿರಿಸಿ, ಬಳಿಕ ಪ್ರಯಾಣಿಕರಿಗೆ ಮರಳಿಸಿದ್ದಾರೆ.

ಸಿಬ್ಬಂದಿಯ ಈ ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಣದ ಆಸೆ ತೊರೆದು ಕರ್ತವ್ಯನಿಷ್ಠೆ ಮೆರೆದ ಸಿಬ್ಬಂದಿಯ ನಡೆ ಪ್ರಶಂಸೆಗೆ ಪಾತ್ರವಾಗಿದೆ.

 

 

 

 

 

Please Share: