ಅಂಕೋಲಾ: ಬೇಲೇಕೇರಿ ಬಂದರಿನಲ್ಲಿ ನಿಲ್ಲಿಸಿಟ್ಟಿದ್ದ “ಶ್ರೀ ಶಾರದಾಂಬ” ಎಂಬ ಮಿನಿ ಪರ್ಶಿನ್ ಬೋಟ್ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹಾನಿಗೊಳಗಾದ ಘಟನೆ ಗುರುವಾರ ನಡೆದಿದೆ.

ಈ ಬೋಟ್‌ವು ಸರಸ್ವತಿ ಅಶೋಕ್ ಬಾನಾವಳಿಕರ್ ಅವರ ಸ್ವತ್ತು ಎನ್ನಲಾಗಿದ್ದು, ನಿನ್ನೆ(ಬುಧವಾರ) ಮಾತ್ರ ಮೀನುಗಾರಿಕೆಗೆ ತೆರಳಿ ದಡದಲ್ಲಿ ನಿಲ್ಲಿಸಿಟ್ಟಿದ್ದಾಗ ಸಮುದ್ರದ ಅಲೆಗಳು ಬಂದು ಅಪ್ಪಳಿಸಿದ ಪರಿಣಾಮ ಮುಳುಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಮೀನುಗಾರರು ಬ್ರೇಕ್‌ವಾಟರ್ ಇಲ್ಲದಿರುವುದೇ ಬಂದರಿನಲ್ಲಿ ಪದೇಪದೇ ಸಂಭವಿಸುತ್ತಿರುವ ಇಂತಹ ಅಪಘಾತಗಳಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬ್ರೇಕ್‌ವಾಟರ್ ಇಲ್ಲದಿರುವುದರಿಂದ ಬಂದರು ಪ್ರದೇಶಕ್ಕೆ ಬರುವ ವೇಳೆ ಕೆಲವೊಮ್ಮೆ ಐದಾರು ಗಂಟೆಗಳ ಕಾಲ ಸಮುದ್ರದಲ್ಲೇ ಕಾಯಬೇಕಾಗುತ್ತದೆ. ಆಗ ಮೀನುಗಳು ಹಾಳಾಗಿ ಸಮುದ್ರದಲ್ಲೇ ಎಸೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ಜೀವ ಮತ್ತು ಆರ್ಥಿಕ ಸುರಕ್ಷತೆಯನ್ನು ಕಾಪಾಡಲು ಬಂದರು ಪ್ರದೇಶದಲ್ಲಿ ತಕ್ಷಣ ಬ್ರೇಕ್‌ವಾಟರ್ ನಿರ್ಮಾಣದ ಅಗತ್ಯವಿದೆ ಎಂದು ಸ್ಥಳೀಯರು ಸರ್ಕಾರದ ಗಮನ ಸೆಳೆದಿದ್ದಾರೆ.

 

Please Share: