ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಚರಂಡಿಯ ಇಕ್ಕಟ್ಟಿನ ಜಾಗದಲ್ಲಿ ಸಿಲುಕಿ ಹೊರಬರಲಾಗದೆ ಪರದಾಡುತ್ತಿದ್ದ ಗೂಳಿಯನ್ನು ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಶನಿವಾರ ಇಲ್ಲಿನ ನಂದನಗದ್ದಾ ಬಳಿ ನಡೆದಿದೆ.

Banner Ad

ಚರಂಡಿಗೆ ಜಾನುವಾರು ಬಿದ್ದಿರುವ ಕುರಿತು ಮಾಹಿತಿ ಲಭಿಸಿದ ಕೂಡಲೇ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕ್ವಿಕ್ ರೆಸ್ಪಾನ್ಸ್ ವಾಹನದ ಮೂಲಕ ಸ್ಥಳಕ್ಕೆ ಧಾವಿಸಿದರು. ಚರಂಡಿಯ ಕಿರಿದಾದ ಜಾಗದಲ್ಲಿ ಗೂಳಿ ಸಿಲುಕಿದ್ದರಿಂದ ಅದನ್ನು ಮೇಲಕ್ಕೆತ್ತಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು.

ಕೊನೆಗೆ ಚರಂಡಿಯ ಮೇಲಿನ ಸ್ಲ್ಯಾಬ್ ತೆರವುಗೊಳಿಸಿ, ಕಾರ್ಯಾಚರಣೆ ನಡೆಸುವ ಮೂಲಕ ಗೂಳಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತ್ವರಿತ ಕಾರ್ಯಾಚರಣೆಯಿಂದ ಜಾನುವಾರಿನ ಜೀವ ಉಳಿದಿದೆ.

ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ, ಅಗ್ನಿಶಾಮಕ ಪ್ರಮುಖರಾದ ಉಲ್ಲಾಸ ನಾಗೇಕರ, ಚಂದನ ದಳವಾಯಿ, ಮಿಥುನ, ಚಾಲಕ ಕೃಷ್ಣ ನಾಯ್ಕ ಹಾಗೂ ಗೃಹರಕ್ಷಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

 

 

 

 

 

 

 

Please Share: