ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಮನೆಯ ಆವರಣದಲ್ಲಿನ ಬಿಲದೊಳಗೆ ಸೇರಿಕೊಂಡು ಹೊರಬರಲಾಗದೆ ಸಿಲುಕಿದ್ದ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ಉರಗ ತಜ್ಞರು ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಗರದ ಕೋಡಿಬಾಗದಲ್ಲಿ ಸೋಮವಾರ ನಡೆದಿದೆ.
ಕರ್ನಾಟಕ ಒನ್ ಕಚೇರಿ ಎದುರಿನ ಮನೆಯ ಕಂಪೌಂಡ್‌ನಲ್ಲಿ ಹೆಬ್ಬಾವು ಬಿಲ ಸೇರಿರುವುದನ್ನು ಗಮನಿಸಿದ ಸತ್ಯವಿಜಯ ಪಡವಲಕರ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಉರಗ ತಜ್ಞ ರಾಜೇಶ ನಾಯ್ಕ ಅವರು ಪರಿಶೀಲಿಸಿದಾಗ ಹೆಬ್ಬಾವು ಬಿಲದೊಳಗೆ ಸಿಲುಕಿರುವುದು ಕಂಡುಬಂದಿದೆ. ಬಳಿಕ ಮಣ್ಣನ್ನು ಅಗೆದು ಹೆಬ್ಬಾವನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.


