Banner Ad

 

ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ದೀಪಾವಳಿ ಹಿನ್ನೆಲೆಯಲ್ಲಿ ಮನೆಯಲ್ಲಿ ಹಚ್ಚಿಟ್ಟಿದ್ದ ದೀಪದ ಹಣತೆಯಿಂದ ಬಟ್ಟೆಗೆ ಬೆಂಕಿ ತಗುಲಿ, ಮನೆಯ ಸ್ಟೇರ್‌ಕೇಸ್ ಕೆಳಭಾಗದಲ್ಲಿ ಬೆಂಕಿ ಹರಡಿದ ಘಟನೆ ಭಾನುವಾರ ರಾತ್ರಿ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ವಿದ್ಯಾಲಯದ ಸಮೀಪ ನಡೆದಿದೆ.

ಶೀತಲ್ ಪಾತಾರೆ ಅವರಿಗೆ ಸೇರಿದ ಮನೆಯಲ್ಲಿ ಸ್ಟೇರ್‌ಕೇಸ್ ಕೆಳಗೆ ದೀಪದ ಹಣತೆಯನ್ನು ಇಡಲಾಗಿತ್ತು. ಹಣತೆಯ ಜ್ವಾಲೆ ಸಮೀಪದಲ್ಲಿದ್ದ ಹಳೆಯ ಬಟ್ಟೆಗಳಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ವಿಲ್ಸನ್ ಫರ್ನಾಂಡಿಸ್ ಅವರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಕ್ಷಿಪ್ರವಾಗಿ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ ಪರಿಣಾಮ ಬೆಂಕಿ ಬಟ್ಟೆಗಳಿಗೆ ಮಾತ್ರ ಸೀಮಿತವಾಗಿದ್ದು, ಮನೆಗೆ ಹರಡುವುದನ್ನು ತಡೆದು ಭಾರೀ ಅನಾಹುತ ತಪ್ಪಿಸಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಗೌಡ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸಪ್ನಿಲ್ ಪೇಡ್ನೇಕರ, ಮಿಥುನ್ ಅಂಕೊಲೇಕರ್, ಭರತಕುಮಾರ ಜಿ.ಎಸ್. ಹಾಗೂ ಚಾಲಕ ಕೃಷ್ಣ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Please Share: