ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: 71 ನೇ ಕರ್ನಾಟಕ ರಾಜ್ಯೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ನಗರ ಗ್ರಾಮೀಣ ಘಟಕದಿಂದ ಅಮದಳ್ಳಿ ಯಲ್ಲಿ ಆಚರಿಸಲಾಯಿತು.

ಧ್ವಜಾರೋಹಣವನ್ನು ಕರವೇ ತಾಲ್ಲೂಕು ಅಧ್ಯಕ್ಷರಾದ ನರೇಂದ್ರ ತಳೇಕರ ಅವರು ನೆರವೇರಿಸಿ ಎಲ್ಲರಿಗೂ ಶುಭ ಕೋರಿ ಮಾತನಾಡಿದರು. ಕನ್ನಡಾಂಬೆಯ ಶ್ರೀ ಭುವನೇಶ್ವರಿ ದೇವಿಗೆ ಹೂ ಪುಷ್ಪ ಅರ್ಪಣೆ ಮಾಡಲಾಯಿತು.
ಕನ್ನಡ ನಾಡಿನ ಹಾಡುಗಳ ಜೊತೆಗೆ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡರ ಭಾಷಣ ಈ ಕಾರ್ಯಕ್ರಮದಲ್ಲಿ ಬಿತ್ತರಿಸಲಾಗಿತ್ತು.
ಈ ಸಂದರ್ಭದಲ್ಲಿ ಕರವೇ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ, ಗ್ರಾಮೀಣ ಘಟಕ ಅಧ್ಯಕ್ಷ ನಾಗರಾಜ ಅಮದಳ್ಳಿ, ಉಪಾಧ್ಯಕ್ಷ ಪ್ರವೀಣ ನಾಯ್ಕ, ದೀಪಕ ಗಾಂವಕರ, ನಿಲೇಶ ಆಗೇರ, ಅಕ್ಷಯ ಗೌಡ, ಸಾಗರ ಆಗೇರ, ಸಂಕೇತ ಗೌಡ, ಸುನಿಲ ಗೌಡ, ಸ್ನೇವಿಶ ಕೀಣಿಕರ ಮುಂತಾದವರು ಉಪಸ್ಥಿತರಿದ್ದರು.


