ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಹೊರರಾಜ್ಯದಿಂದ ಕೆಲಸಗಾರರನ್ನು ಕರೆತಂದ ವಿಚಾರವಾಗಿ ನೇವಲ್ ಡಿಫೆನ್ಸ್ ಸಿವಿಲಿಯನ್ ಸಿಬ್ಬಂದಿಗೆ ದೂರವಾಣಿ ಮೂಲಕ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad

ಬಿಣಗಾದ ಮುಡ್ಲಮಕ್ಕಿ ನಿವಾಸಿ ಸುಬ್ರಮಣ್ಯ ಸೋಮಾ ಹರಿಕಂತ್ರ (49) ದೂರು ನೀಡಿದ್ದು, ಅಂಕೋಲಾದ ಹಾರವಾಡ ಸೀಬರ್ಡ್ ಕಾಲೋನಿ ನಿವಾಸಿ ದೀಪಕ ಚಂದ್ರು ತಾಂಡೇಲ ಆರೋಪಿತನಾಗಿದ್ದಾನೆ. ಇಬ್ಬರೂ ನೇವಲ್ ಬೇಸ್‌ನಲ್ಲಿ ಕೆಲಸ ಮಾಡುತ್ತಿದ್ದವರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅ. 3ರಂದು ರಾತ್ರಿ 8.45ರ ಸುಮಾರಿಗೆ ದೂರುದಾರರ ಸ್ನೇಹಿತ ಸುಬ್ರಮಣ್ಯ ಭಟ್ ಅವರ ಮೊಬೈಲ್‌ಗೆ ಕರೆ ಮಾಡಿದ ಆರೋಪಿತ, ದೂರುದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸಿ, ಹೊರರಾಜ್ಯದಿಂದ ಕೆಲಸಗಾರರನ್ನು ಕರೆತಂದಿರುವ ವಿಚಾರವಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಭಾಷಣೆಯನ್ನು ಸುಬ್ರಮಣ್ಯ ಭಟ್ ಮೊಬೈಲ್‌ನಲ್ಲಿ ಧ್ವನಿಮುದ್ರಿಸಿಕೊಂಡಿದ್ದಾರೆ.

ಈ ಕುರಿತು ಮೊದಲು ಎನ್‌ಸಿ ಸಂಖ್ಯೆ 55/2026ರಡಿ ದಾಖಲಿಸಿಕೊಂಡಿದ್ದ ಪೊಲೀಸರು, ಅ. 12ರಂದು ನ್ಯಾಯಾಲಯದ ಅನುಮತಿ ಪಡೆದು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 

Please Share: