ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಆರು ವರ್ಷಗಳಿಂದ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ ರಾಧಾಕೃಷ್ಣ ನಾಯಕ ಅವರನ್ನು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಸುಭಾಷ ನಾಯ್ಕ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಪಂಚಾಯಿತಿ ವ್ಯಾಪ್ತಿಯ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದ ರಾಧಾಕೃಷ್ಣ ನಾಯಕ ಅವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಾರ್ವಜನಿಕರೊಂದಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಪಂಚಾಯಿತಿಯ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ್ದ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸದಸ್ಯ ಸುಭಾಷ ನಾಯ್ಕ, ರಾಧಾಕೃಷ್ಣ ನಾಯಕ ಅವರು ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದರ ಜತೆಗೆ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಸೇವೆ ಹಾಗೂ ಸಹಕಾರವನ್ನು ಗ್ರಾಮಸ್ಥರು ಸದಾ ಸ್ಮರಿಸಲಿದ್ದಾರೆ ಎಂದರು.
ಬಳಿಕ ರಾಧಾಕೃಷ್ಣ ನಾಯಕ ಅವರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಗೌರವಿಸಲಾಯಿತು. ಸ್ಮರಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ಅವರ ಮುಂದಿನ ಸೇವಾ ಜೀವನ ಸುಖಕರ ಹಾಗೂ ಯಶಸ್ವಿಯಾಗಲಿ ಎಂದು ಗ್ರಾಮಸ್ಥರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮೋದ ಗಾಂವಕರ, ಪ್ರಶಾಂತ ಕಳಸ್, ಹೊನ್ನಪ್ಪ ಗೌಡ, ವೆಂಕು ಗೌಡ, ಸುಧಾಕರ ಗೌಡ, ಹಿರಾ ಗೌಡ, ನಾರಾಯಣ ಗೌಡ, ಗಣಪತಿ ಗೌಡ, ಪ್ರಭಾಕರ ಗೌಡ, ರಾಜು ಗೌಡ, ಮಂಗಲದಾಸ ಗೌಡ, ಸುಜನ್ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


