ಕರಾವಳಿ ವಾಯ್ಸ್ ನ್ಯೂಸ್ 

ದಾಂಡೇಲಿ, ಆ.17: ತಾಲೂಕಿನ ಹಸನ್ ಮಾಳ್ ಗ್ರಾಮದ ವೈಲ್ಡರ್ ನೆಸ್ಟ್ ರೆಸಾರ್ಟ್‌ನಲ್ಲಿ ಸೋಮವಾರ ಬೆಳಗಿನ ಜಾವ ಬ್ಲ್ಯಾಕ್ ಪ್ಯಾಂಥರ್ ದಾಳಿ ನಡೆಸಿ ಜರ್ಮನ್ ಶೆಫರ್ಡ್ ನಾಯಿಯನ್ನು ಕೊಂದು ಹಾಕಿದ ಘಟನೆ ನಡೆದಿದೆ.

ಸೋಮವಾರ ಬೆಳಗಿನ ಸುಮಾರು 4 ಗಂಟೆ ವೇಳೆಗೆ ರೆಸಾರ್ಟ್ ಆವರಣದಲ್ಲಿ ಮಲಗಿದ್ದ ಜರ್ಮನ್ ಶೆಫರ್ಡ್ ನಾಯಿಯ ಮೇಲೆ ಬ್ಲ್ಯಾಕ್ ಪ್ಯಾಂಥರ್ ದಾಳಿ ನಡೆಸಿದೆ. ದಾಳಿಗೆ ಒಳಗಾದ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಮೃತ ನಾಯಿ ರೆಸಾರ್ಟ್ ಮಾಲೀಕ ಅಬ್ದುಲ್ ಕರೀಂ ಖತೀಬ್ ಅವರಿಗೆ ಸೇರಿದ್ದಾಗಿದೆ.

ನಾಯಿ ಮೇಲೆ ಬ್ಲ್ಯಾಕ್ ಪ್ಯಾಂಥರ್ ದಾಳಿ ನಡೆಸಿದ ದೃಶ್ಯಗಳು ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಬಳಿಕ ರೆಸಾರ್ಟ್ ಸಿಬ್ಬಂದಿ ಹಾಗೂ ಹಾಸನ್ ಮಾಳ್ ಗ್ರಾಮದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

ರೆಸಾರ್ಟ್ ಸುತ್ತಮುತ್ತ ಬ್ಲ್ಯಾಕ್ ಪ್ಯಾಂಥರ್ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳೀಯರ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Please Share: