ಕರಾವಳಿ ವಾಯ್ಸ್ ನ್ಯೂಸ್ 

ಅಂಕೋಲಾ: ಗುರು ಪೂರ್ಣಿಮೆಯ ಅಂಗವಾಗಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಬುಧವಾರ ತಾಲೂಕಿನ ಹಲವು ನಿವೃತ್ತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಜಿಲ್ಲಾ ಅಧ್ಯಕ್ಷ ರಾಜೇಂದ್ರ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಶಿಕ್ಷಕರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರವೀಂದ್ರ ಕೇಣಿ, ಗಾಬಿತ್ ಕೇಣಿಯ ದಯಾನಂದ ಕಿರ್ಲೊಸ್ಕರ್, ನದಿಭಾಗದ ತಾರಾನಾಥ ನಾಯ್ಕ, ಬೋಬ್ರುವಾಡದ ಮೋಹನ ನಾಯ್ಕ, ಅಂಬಾರಕೊಡ್ಲದ ಕೆ.ಎಂ. ಗೌಡ, ಹುಲಿದೇವರವಾಡದ ಎಂ.ಬಿ. ಆಗೇರ್ ಹಾಗೂ ಹಿಚ್ಕಡದ ನಾರಾಯಣ ಎಂ. ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜಿಲ್ಲಾ ಮಾಧ್ಯಮ ವಕ್ತಾರ ಜಗದೀಶ್ ನಾಯ್ಕ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸಂಜಯ್ ಎಂ. ನಾಯ್ಕ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ಮಂಡಲ ಕಾರ್ಯದರ್ಶಿ ಚಂದ್ರಕಾಂತ ನಾಯ್ಕ, ಶ್ರೀಧರ ನಾಯ್ಕ, ಪ್ರಮುಖರಾದ ಭಾಸ್ಕರ್ ನಾರ್ವೇಕರ, ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ನೀಲೇಶ ಡಿ. ನಾಯ್ಕ, ಓಬಿಸಿ ಮೋರ್ಚಾ ಅಧ್ಯಕ್ಷ ನಾಗರಾಜ ನಾಯ್ಕ,

ಪುರಸಭೆಯ ಮಾಜಿ ಸದಸ್ಯರಾದ ಜಯ ನಾಯ್ಕ, ವಿಶ್ವನಾಥ ನಾಯ್ಕ, ಮಂಗೇಶ ಆಗೇರ್, ಗಣಪತಿ ನಾಯ್ಕ (ಸೂಪರ್), ದಾಮೋದರ ರಾಯ್ಕರ್, ಮೋಹನ್ ಖಾರ್ವಿ, ಬಿಂದೇಶ್ ನಾಯ್ಕ, ವಿ.ಎಸ್. ಭಟ್, ನಾರಾಯಣ ಹೆಗಡೆ, ರಾಜೇಶ್ ನಾಯ್ಕ, ಮಾಂಕಾಳ ಗೌಡ, ಸುನಿಲ್ ನಾಯ್ಕ, ರಾಘವೇಂದ್ರ ಭಟ್, ವಿನಾಯಕ ಪೂಜಾರಿ, ಗಜಾನನ ಬಂಟ, ಮೋಹನ್ ನಾಯ್ಕ, ಸೋನಂ ಅಂಕೋಲೆಕರ್, ಸಂತೋಷ್ ನಾಯ್ಕ, ರಘುವೀರ್ ನಾಯ್ಕ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Please Share: