ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಕೆಲವು ದಿನಗಳ ಹಿಂದೆ ಜೂಜಾಟದ ವೀಡಿಯೋ ವೈರಲ್ ಆದ ಬಳಿಕ ಇದೀಗ ಅಂಕೋಲಾದ ಮಟಕಾಧಿಪತ್ಯವು ಬದಲಾಗಿದ್ದು ಇದೀಗ ಅರಣ್ಯ ರಕ್ಷಕ ಬಿರುದಾಂಕಿತನಾದ ಕಾಡಿನ ರಾಜನೋರ್ವನಿಗೆ ಗದ್ದುಗೆ ಸಿಕ್ಕಿದೆ.
ಜೂಜಿನ ಬಗ್ಗೆ ತಲೆ ಕೆಡಿಸಿಕೊಂಡಿರುವ ಪೊಲೀಸರಿಗೆ ಮಟ್ಕಾ ರಾಜನ ತಲೆನೋವು ಕೂಡ ಎದುರಾಗಿದೆ. ‘ತಮ್ಮ’ ಬೇಳೆ ಬೇಯಿಸಿಕೊಳ್ಳಲು, ‘ತಮ್ಮ’ ಜೇಬು ತುಂಬಿಸಿಕೊಳ್ಳಲು ಜನಪ್ರತಿನಿಧಿಗಳ ಹೆಸರು ಕೂಡ ಬಳಸಿಕೊಳ್ಳಲಾಗುತ್ತಿದ್ದು ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಬಾಳೆ ಮಂಡಿಯಿಂದ ಬಾಂಬೆ ಮಾರ್ಕೆಟ್ ವರೆಗೂ ಆಳುವ ಇವರು ದುಡ್ಡಿನ ಹೊಳೆ ಹರಿಸಲಿದ್ದಾರೆ, ಇನ್ನಾದರೂ ಪೊಲೀಸರು ಇವರಿಗೆ ಲಗಾಮು ಹಾಕಬೇಕು ಎನ್ನುವುದು ಅಂಕೋಲೆ ನಗರವಾಸಿಗಳ ಆಶಯವಾಗಿದೆ.
