ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಬಿ.ಇ. ಕಾಲೇಜು ಮಾಜಾಳಿಯಲ್ಲಿ ಅಂತಿಮ ಸುತ್ತಿನ ಆನ್‌ಲೈನ್ ಕೌನ್ಸೆಲಿಂಗ್ ಬಳಿಕ ಬಾಕಿ ಉಳಿದಿರುವ ಸೀಟುಗಳಿಗೆ ನಿಯಮಾನುಸಾರ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾರವಾರ–ಅಂಕೋಲಾ ಶಾಸಕ ಹಾಗೂ ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ ಕೃಷ್ಣ ಸೈಲ್ ತಿಳಿಸಿದ್ದಾರೆ.

Banner Ad

ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಸಿಇಟಿ ಬರೆದಿರುವ ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ, ತಾಲೂಕಿನ ಹೊಸಾಳಿ–ಮುಡಗೇರಿ ರಸ್ತೆಯ ಆಯ್ದ ಭಾಗಗಳ ದುರಸ್ತಿ ಕಾರ್ಯವನ್ನು ಶುಕ್ರವಾರದಿಂದಲೇ ಆರಂಭಿಸುವಂತೆ ಶಾಸಕ ಸತೀಶ ಸೈಲ್ ಅವರು ಪಿಆರ್‌ಇಡಿ ಎಇಇ ಪ್ರಲ್ಹಾದ ರಾಣೆ ಅವರಿಗೆ ಸೂಚಿಸಿದ್ದಾರೆ.

ಸ್ಥಳೀಯರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಗಣೇಶ ಚತುರ್ಥಿಗೂ ಮುನ್ನ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಾಸಕ ಸೈಲ್ ತಿಳಿಸಿದ್ದಾರೆ.

 

 

 

Please Share: