ಕರಾವಳಿ ವಾಯ್ಸ್ ನ್ಯೂಸ್

ಅಂಕೋಲಾ: ಕಾಶ್ಮೀರಿ ಸೇಬು ತುಂಬಿದ ಲಾರಿ ಪಲ್ಟಿಯಾಗಿ ರಸ್ತೆ ಸೇಬು ಹಣ್ಣಿನ ಗೋದಾಮಿನಂತಾದ ಘಟನೆ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿ ಸೋಮವಾರ ನಡೆದಿದೆ.

ಕಾಶ್ಮೀರದಿಂದ ಮಂಗಳೂರಿನತ್ತ ಸೇಬು ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯು ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬಾಳೆಗುಳಿಯ ಬಳಿ ತೀವ್ರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯ ಪರಿಣಾಮ ನೂರಾರು ಬಾಕ್ಸ್‌ಗಳ ಸೇಬುಗಳು ರಸ್ತೆಯುದ್ದಕ್ಕೂ ಚೆಲ್ಲಿಹೋಗಿ ಅಚ್ಚರಿ ಮೂಡಿಸಿದವು. ಕೆಲವರು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದರು.

ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಸೇಬಿನ ರಾಶಿಯ ಮಧ್ಯೆ ಹಾದು ಹೋಗುವಂತಾದ ಅಸಾಮಾನ್ಯ ದೃಶ್ಯ ಕಂಡುಬಂತು. ಬಳಿಕ ಕ್ರೇನ್‌ ಸಹಾಯದಿಂದ ಲಾರಿಯನ್ನು ಎತ್ತಿ ರಸ್ತೆ ಬದಿಗೆ ಸರಿಸಲಾಯಿತು.

ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಅಂಕೋಲಾ ಪೊಲೀಸ್‌ ಠಾಣಾ ಸಿಬ್ಬಂದಿಗಳು ಸಂಚಾರ ನಿಯಂತ್ರಿಸಿ, ರಸ್ತೆ ತೆರವುಗೊಳಿಸುವ ಕಾರ್ಯ ಕೈಗೊಂಡರು. ಭಾಗ್ಯವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 

 

 

Please Share: