ಕರಾವಳಿ ವಾಯ್ಸ್ ನ್ಯೂಸ್

ಹೊನ್ನಾವರ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಬೆಳೆಸಿಕೊಂಡ ಮೂವರು ಯುವಕರು ಅಪ್ರಾಪ್ತೆಯೊಬ್ಬಳಿಗೆ ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ ಘಟನೆ ಹೊನ್ನಾವರದಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮೂವರು ಯುವಕರ ವಿರುದ್ಧ ಪೊಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಅಪ್ರಾಪ್ತೆಯ ತಾಯಿ ಹೊನ್ನಾವರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಆಧಾರದ ಮೇಲೆ, ಅಭಿ ಗೌಡ (22, ವಾಸ: ಮಾವಿನಕುರ್ವಾ, ಹೊನ್ನಾವರ), ಹೇಮಂತ ನಾಯ್ಕ (21, ವಾಸ: ಕವಲಕ್ಕಿ, ಹೊನ್ನಾವರ) ಹಾಗೂ ದೇವೇಂದ್ರ ನಾಯ್ಕ (26, ವಾಸ: ಗೇರುಸೊಪ್ಪ, ಹಾಲಿ ವಾಸ: ಇಡಗುಂಜಿ) ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮುಖಾಂತರ ಅಪ್ರಾಪ್ತೆಗೆ ಪರಿಚಯವಾದ ಅಭಿ ಗೌಡ ಎಂಬ ಯುವಕನು ತನ್ನ ಕಾರಿನಲ್ಲಿ ಅವಳನ್ನು ಮುಗಳಿ ಬೀಚ್‌ಗೆ ಕರೆದುಕೊಂಡು ಹೋಗಿ ಅಲ್ಲಿ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂದು ತಿಳಿದು ಬಂದಿದೆ.

ನಂತರ ಹೇಮಂತ ನಾಯ್ಕ ಎಂಬ ಯುವಕನು ಸಹ ಮುರ್ಡೇಶ್ವರದ ಲಾಡ್ಜ್‌ನಲ್ಲಿ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಾನೆ. ಇದೇ ವೇಳೆ ದೇವೇಂದ್ರ ನಾಯ್ಕ ಎಂಬ ಯುವಕನು ಕೂಡ ಮುರ್ಡೇಶ್ವರ ಲಾಡ್ಜ್ ಹಾಗೂ ಇಕೋ ಬೀಚ್‌ನಲ್ಲಿ ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಿದ್ದಾನೆ ಎಂಬ ಆರೋಪ ಹೊರಬಿದ್ದಿದೆ.

ಕೆಲವು ದಿನಗಳ ಹಿಂದೆ ಅಪ್ರಾಪ್ತೆಗೆ ಮಾಸಿಕ ಚಕ್ರ (ಪಿರಿಯಡ್ಸ್) ಬಾರದ ಹಿನ್ನೆಲೆಯಲ್ಲಿ ತಾಯಿ ಪರೀಕ್ಷೆ ನಡೆಸಿದಾಗ ಗರ್ಭಧಾರಣೆ ದೃಢಪಟ್ಟಿದೆ. ವಿಚಾರಣೆ ವೇಳೆ ಅಪ್ರಾಪ್ತೆಯು ಮೂವರು ಆರೋಪಿತರ ವಿರುದ್ಧ ನಿಖರ ಹೇಳಿಕೆ ನೀಡಿದ್ದಾಳೆ.

ಪೊಲೀಸರು ಮೂವರ ವಿರುದ್ಧ ಪೊಕ್ಸೋ ಕಾಯ್ದೆ (Protection of Children from Sexual Offences Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರನ್ನು ಬಂಧಿಸಿ ತನಿಖೆ ಮುಂದುವಸಿದ್ದಾರೆ.

ಸ್ಥಳೀಯ ಪ್ರತಿಕ್ರಿಯೆ:

ಈ ಘಟನೆ ಹೊನ್ನಾವರ ಪ್ರದೇಶದಲ್ಲಿ ಆಘಾತ ಮೂಡಿಸಿದ್ದು, ಪೋಷಕರು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯ ಮೇಲಿನ ಕಣ್ಗಾವಲು ಕಡ್ಡಾಯಗೊಳಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

 

Please Share: