ಶಿರಸಿ: ಮಾರಿಕಾಂಬಾ ನಗರ 2ನೇ ಕ್ರಾಸ್‌ನಲ್ಲಿ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಮಾರಿಕಾಂಬಾನಗರದ ನಿವಾಸಿ ಶಿಕ್ಷಕಿ ರಮಾ ಇವರು ಅ.2ರಂದು ಮಧ್ಯಾಹ್ನ 3.30ಕ್ಕೆ ಮನೆಯ ಹಿಂದಿನ ಹಾಗೂ ಮುಂಭಾಗದ ಬಾಗಿಲುಗಳನ್ನು ಭದ್ರಪಡಿಸಿ ಸಿದ್ದಾಪುರದ ಮನಮನೆ ಹತ್ತಿರದಲ್ಲಿರುವ ತಮ್ಮ ರೆಸಾರ್ಟ್‌ಗೆ ತೆರಳಿದ್ದರು.
ಆದರೆ ಅದೇ ದಿನದಿಂದ ಅ. 5 ಬೆಳಗ್ಗೆ 9.30ರೊಳಗಿನ ಅವಧಿಯಲ್ಲಿ, ಅನಾಮಿಕ ಕಳ್ಳರು ಮನೆಯ ಮುಂಭಾಗದ ಇಂಟರಲಾಕ್ ಅನ್ನು ಆಯುಧದ ಸಹಾಯದಿಂದ ಮುರಿದು ಒಳಗೆ ನುಗ್ಗಿ, ಮೊದಲ ಮಹಡಿಯ ಬೆಡ್ ರೂಮಿನ ಕಪಾಟಿನಲ್ಲಿ ಇಟ್ಟಿದ್ದ ₹48,000 ನಗದು, ಸುಮಾರು ₹7 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಹಾಗೂ ₹50,000 ಮೌಲ್ಯದ ಬೆಳ್ಳಿಯ ತಾಟ (500 ಗ್ರಾಂ ತೂಕ) ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರನ್ನು ಪತ್ತೆಹಚ್ಚಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲು ತನಿಖೆ ಆರಂಭಿಸಿದ್ದಾರೆ.


