ಹುಬ್ಬಳ್ಳಿ: ನಗರದ ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ಮಹಿಳೆಯರ ಒಳ ಉಡುಪುಗಳ ಕಳ್ಳತನ ನಡೆಸುತ್ತಿರುವ ಕಾಮುಕ ಯುವಕನ ಕೃತ್ಯ ಬಹಿರಂಗವಾಗಿದೆ.

ಮನೆಗಳ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಮಾತ್ರ ಟಾರ್ಗೆಟ್ ಮಾಡಿಕೊಂಡು ಕದ್ದುಕೊಂಡು ಹೋಗುತ್ತಿದ್ದ ಸೈಕೋಪಾತ್ ಯುವಕ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆ ಸಿಕ್ಕಿದ್ದಾನೆ. ರಾತ್ರಿ ವೇಳೆ ಯಾರಿಗೂ ತಿಳಿಯದಂತೆ ಬಂದು, ಬಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದಾನೆ ಎಂದು ದೃಶ್ಯಾವಳಿಗಳು ತೋರಿಸುತ್ತವೆ.

Banner Ad

ಸಾಮಾನ್ಯ ಬಟ್ಟೆಗಳನ್ನು ಬಿಟ್ಟು ಕೇವಲ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿರುವುದರಿಂದ ಸ್ಥಳೀಯ ಮಹಿಳೆಯರಲ್ಲಿ ಭೀತಿ ಮನೆಮಾಡಿದೆ. ಈ ಅಸಹಜ ಘಟನೆ ಜನರ ನಿದ್ದೆಗೆಡಿಸುವಂತಾಗಿದೆ. ಘಟನೆಯ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆರೋಪಿಯನ್ನು ತಕ್ಷಣವೇ ಬಂಧಿಸಬೇಕೆಂದು ಸ್ಥಳೀಯರು ಪೊಲೀಸರಿಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

Please Share: