ಕರಾವಳಿ ವಾಯ್ಸ್ ನ್ಯೂಸ್
ರಾಮನಗರ: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಕಳ್ಳರು ಶೋರೂಮ್ ಮಾಲೀಕರಿಗೆ ‘ಆಘಾತದ ಗಿಫ್ಟ್’ ನೀಡಿದಂತಾಗಿದೆ! ರಾಮನಗರದ ಅಮಿತ್ ದೇಸಾಯಿ ಅವರ ಮಾಲೀಕತ್ವದ ದ್ವಿಚಕ್ರ ವಾಹನ ಶೋರೂಮ್‌ನ ಹಿಂಬದಿ ಶಟರ್ ಮುರಿದು ಕಳ್ಳರು ಎರಡು ಹೊಸ ಹೋಂಡಾ ಆಕ್ಟಿವಾ ಬೈಕ್‌ಗಳನ್ನು ಕದ್ದೊಯ್ದಿದ್ದಾರೆ.
ಮಾಹಿತಿಯಂತೆ, ಅಕ್ಟೋಬರ್ 19ರ ಬೆಳಗಿನ ಜಾವ 3ರಿಂದ 3.30ರ ನಡುವೆ ಇಬ್ಬರು ಕಳ್ಳರು ಶೋರೂಮ್ ಹಿಂಬದಿಯಿಂದ ನುಗ್ಗಿ ಅಲ್ಲಿ ನಿಲ್ಲಿಸಿದ್ದ ಎರಡು ಹೊಸ ಆಕ್ಟಿವಾ ಬೈಕ್‌ಗಳನ್ನು ಕಳ್ಳತನ ಮಾಡಿದ್ದಾರೆ. ದೀಪಾವಳಿ ಸ್ಟಾಕ್‌ಗಾಗಿ ತಂದು ಇಟ್ಟಿದ್ದ ಹೊಸ ಬೈಕ್‌ಗಳೇ ಕಳ್ಳರ ಬಲಿಯಾಗಿವೆ.
ಕಳ್ಳರು ಕದ್ದ ಬೈಕ್‌ಗಳನ್ನು ಬೆಳಗಾವಿಯ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಿದ್ದು, ಖಾನಾಪುರದ ಗಣೇಬೈಲ್ ಟೋಲ್ ನಾಕಾದ ಸಿಸಿಟಿವಿ ದೃಶ್ಯಗಳಲ್ಲಿ ಆ ಬೈಕ್‌ಗಳ ಹಾದಿ ಪತ್ತೆಯಾಗಿದೆ.
ಈ ಕುರಿತು ಶೋರೂಮ್ ಮಾಲೀಕ ಅಮಿತ್ ದೇಸಾಯಿ ಅವರು ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಳ್ಳರ ಸುಳಿವಿನತ್ತ ಚುರುಕಾಗಿ ತನಿಖೆ ಆರಂಭಿಸಿದ್ದಾರೆ.


