ಯಲ್ಲಾಪುರ: ಪತ್ನಿಯ ಶೀಲದ ಮೇಲೆ ಶಂಕೆ ಪಟ್ಟು ಕ್ರೌರ್ಯಕ್ಕೆ ಕೈ ಹಾಕಿದ ಪತಿಯ ಕ್ರಿಯೆಯಿಂದ ಮತ್ತೊಂದು ಗೃಹ ಹಿಂಸೆ ಪ್ರಕರಣ ದುರ್ಘಟನೆಯಾಗಿ ಅಂತ್ಯಗೊಂಡಿದೆ. ತಾಲೂಕಿನ ಕಿರವತ್ತಿ ಬೊಂಬಡಿಕೊಪ್ಪದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ತೀವೃ ಆತಂಕ ಹುಟ್ಟಿಸಿದೆ.

ಬೊಂಬಡಿಕೊಪ್ಪದ ನಿವಾಸಿ ಜನ್ನಿ ಬಾಬು ಖಾತ್ರೋಟ (ಮೃತಳು) ಹಾಗೂ ಪತಿ ಬಾಬು ಎಕ್ಕು ಖಾತ್ರೋಟ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಮದುವೆಯಾದ ಬಳಿಕದಿಂದಲೇ ಪತಿ ಪತ್ನಿಯ ಮೇಲೆ ಶೀಲದ ಬಗ್ಗೆ ಶಂಕೆ ಪಟ್ಟು ಕಾಡುತ್ತಿದ್ದ ಎನ್ನಲಾಗಿದೆ.

ಅಕ್ಟೋಬರ್ 3ರಂದು ನಡೆದ ಜಗಳದ ವೇಳೆ ಬಾಬು ಖಾತ್ರೋಟ ಪತ್ನಿಯನ್ನು ನಿಂದಿಸಿ ಬೈದು, ಬೈಕಿಗೆ ಹಾಕಲು ತಂದಿದ್ದ ಪೆಟ್ರೋಲ್ ಕ್ಯಾನ್‌ನಿಂದ ಪತ್ನಿಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ನರಳಿದ ಜನ್ನಿ ಅವರು ತವರು ಮನೆ ಕಡೆ ಓಡಿ ಸಹಾಯ ಕೇಳಿದ್ದು, ತವರು ಮನೆಯವರು ಬೆಂಕಿ ಆರಿಸಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೊದಲಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅಲ್ಲಿ ಪೊಲೀಸ್ ಹೇಳಿಕೆ ನೀಡಿದರೂ, ಗಾಯಗಳ ತೀವ್ರತೆಯಿಂದ ಅಕ್ಟೋಬರ್ 10ರಂದು ಅವರು ಸಾವನ್ನಪ್ಪಿದ್ದಾರೆ.

ಈ ಸಂಬಂಧ ಮೃತಳ ಸಹೋದರ ಗಂಗಾರಾಮ ಬಾಬು ಎಡಗೆ ಅವರು ಯಲ್ಲಾಪುರ ಪೊಲೀಸರಿಗೆ ದೂರು ನೀಡಿದ್ದು, ಪತಿ ಬಾಬು ಎಕ್ಕು ಖಾತ್ರೋಟ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದೆ.

 

ಪ್ರಕರಣದ ತನಿಖೆ ಪಿಎಸ್‌ಐ ರಾಜಶೇಖರ ವಂದಲಿ ಅವರವರ ಕೈಯಲ್ಲಿ ಮುಂದುವರಿದಿದೆ.

Please Share: