ಮುಂಡಗೋಡ: ಮುಕಳೇಪ್ಪ ಮದುವೆ ಪ್ರಕರಣದ ಹಿನ್ನಲೆಯಲ್ಲಿ ಶ್ರೀರಾಮ ಸೇನೆಯ ಫೈರ್ ಬ್ರಾಂಡ್ ನಾಯಕ ಪ್ರಮೋದ್ ಮುತಾಲಿಕ್ ಗುರುವಾರ ಮುಂಡಗೋಡ ಪ್ರವೇಶಿಸಲಿದ್ದಾರೆ. ಅವರ ಆಗಮನದೊಂದಿಗೆ ಮುಂಡಗೋಡದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲು ಹಿಂದೂ ಪರ ಸಂಘಟನೆಗಳು ಸಜ್ಜಾಗಿವೆ.
ತಾಲೂಕಿನ ಐಬಿ ಮೈದಾನದಿಂದ ಪ್ರಾರಂಭವಾಗುವ ಈ ರ್ಯಾಲಿ ತಹಸೀಲ್ದಾರ್ ಕಚೇರಿಯವರೆಗೆ ಸಾಗಲಿದ್ದು, ಅಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದೆ. ವಿವಿಧ ಹಿಂದೂ ಪರ ಸಂಘಟನೆ ನೂರಾರು ಕಾರ್ಯಕರ್ತರು ಬೈಕ್‌ಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ.
ಈ ಹಿಂದೆ ಖ್ವಾಜ ಬಂದೆನವಾಜ ಶಿರಹಟ್ಟಿ–ಮುಕಳೇಪ್ಪ ಮದುವೆಗೆ ವಿರೋಧವಾಗಿ ಮುತಾಲಿಕ್ ಪ್ರತಿಭಟನೆ ನಡೆಸಿದ್ದಲ್ಲದೆ, ಹುಬ್ಬಳ್ಳಿ–ಧಾರವಾಡದಲ್ಲಿ ಧ್ವನಿ ಎತ್ತಿ “ಲವ್ ಜಿಹಾದ್” ಆರೋಪವನ್ನೂ ಮಾಡಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ಯುವತಿಯ ಊರಾದ ಮುಂಡಗೋಡದಲ್ಲಿ ಮುತಾಲಿಕ್ ನೇತೃತ್ವದ ಬೈಕ್ ರ್ಯಾಲಿ ನಡೆಯಲಿದೆ.
ಪ್ರಮೋದ್ ಮುತಾಲಿಕ್ ಅವರ ಆಗಮನದ ಹಿನ್ನೆಲೆಯಲ್ಲಿ ಮುಂಡಗೋಡದಲ್ಲಿ ಚಟುವಟಿಕೆ ಗರಿಗೆದರಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.


