ಕರಾವಳಿ ವಾಯ್ಸ್ ನ್ಯೂಸ್ 

ಕಾರವಾರ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಹಿಳೆಯರು ಭಾಗವಹಿಸುವ ಹಿನ್ನೆಲೆಯಲ್ಲಿ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಗದಿತ ದಿನಗಳಂದು ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

Banner Ad

ಭಟ್ಕಳ ಶಹರದಲ್ಲಿ ಸೆ.16, ಭಟ್ಕಳ ಗ್ರಾಮೀಣದಲ್ಲಿ ಸೆ.14, ಮುರ್ಡೇಶ್ವರದಲ್ಲಿ ಸೆ.24, ಮಂಕಿಯಲ್ಲಿ ಸೆ.16 (48 ಗಂಟೆ) ಹಾಗೂ ಸೆ.20, ಹೊನ್ನಾವರದಲ್ಲಿ ಸೆ.18 ಮತ್ತು ಸೆ.22, ಕುಮಟಾದಲ್ಲಿ ಸೆ.18 ಮತ್ತು ಸೆ.20, ಗೋಕರ್ಣದಲ್ಲಿ ಸೆ.17 (48 ಗಂಟೆ) ಮದ್ಯ ನಿಷೇಧ ಜಾರಿಯಲ್ಲಿರಲಿದೆ.

ಕಾರವಾರ ಶಹರದಲ್ಲಿ ಸೆ.18, 20, 22 ಹಾಗೂ 24, ಮಲ್ಲಾಪುರದಲ್ಲಿ ಸೆ.20 ಮತ್ತು 22, ಅಂಕೋಲಾದಲ್ಲಿ ಸೆ.15, 18, 20 ಹಾಗೂ ಸೆ.22ರ ಬೆಳಗ್ಗೆ 6ರಿಂದ ಸೆ.25ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಶಿರಸಿ ತಾಲೂಕಿನಲ್ಲಿ ಸೆ.18ರ ಬೆಳಗ್ಗೆ 6ರಿಂದ ಸೆ.20ರ ಬೆಳಗ್ಗೆ 6ರವರೆಗೆ ಹಾಗೂ ಸೆ.23 ಮತ್ತು 25ರಂದು, ಸಿದ್ದಾಪುರದಲ್ಲಿ ಸೆ.18 ಹಾಗೂ ಸೆ.20ರ ಬೆಳಗ್ಗೆ 6ರಿಂದ ಸೆ.21ರ ಬೆಳಗ್ಗೆ 6ರವರೆಗೆ, ಮುಂಡಗೋಡದಲ್ಲಿ ಸೆ.18, 20, 22 ಹಾಗೂ 26ರಂದು, ಯಲ್ಲಾಪುರ ಪಟ್ಟಣ, ಮಂಚಿಕೇರಿ ಮತ್ತು ಕಿರವತ್ತಿಯಲ್ಲಿ ಸೆ.18, 20 ಹಾಗೂ 24ರಂದು ನಿಷೇಧ ಜಾರಿಯಲ್ಲಿರಲಿದೆ.

ದಾಂಡೇಲಿಯಲ್ಲಿ ಸೆ.18, 20, 22 ಹಾಗೂ 25, ಹಳಿಯಾಳದಲ್ಲಿ ಸೆ.18, 20, 22 ಹಾಗೂ 24, ಜೋಯಿಡಾದಲ್ಲಿ ಸೆ.20, 22 ಹಾಗೂ ಸೆ.24ರಿಂದ 48 ಗಂಟೆಗಳ ಕಾಲ, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.20, 22 ಹಾಗೂ 25ರಂದು ಮದ್ಯ ನಿಷೇಧಿಸಲಾಗಿದೆ.

ನಿಷೇಧದ ಅವಧಿಯಲ್ಲಿ ವೈನ್ ಶಾಪ್, ಬಾರ್ ಸೇರಿದಂತೆ ಎಲ್ಲಾ ರೀತಿಯ ಮದ್ಯದ ಮಾರಾಟ ಹಾಗೂ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಹುತೇಕ ಅವಧಿಗಳಲ್ಲಿ ನಿಷೇಧವು ಬೆಳಗ್ಗೆ 6ರಿಂದ ರಾತ್ರಿ 6ರವರೆಗೆ ಅಥವಾ 24 ಗಂಟೆಗಳ ಕಾಲ ಜಾರಿಯಲ್ಲಿದ್ದು, ಆದೇಶದಲ್ಲಿ ಸೂಚಿಸಿರುವಂತೆ ಕೆಲವು ಕಡೆ 48 ಗಂಟೆಗಳವರೆಗೆ ಅನ್ವಯವಾಗಲಿದೆ.

 

 

 

 

Please Share: