ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಸದಾಶಿವಗಡದ ಜೈ ದುರ್ಗಾಮಾತಾ ಕ್ರೇಡಿಟ್ ಸೌಹಾರ್ದ ಸಹಕಾರಿ ಸಂಘದ ಮುಖ್ಯಸ್ಥ ಲಿಂಗರಾಜು ಪುತ್ತು ಕಲ್ಗುಟ್ಕರನನ್ನು ಇಂದು (ಸೋಮವಾರ) ಸಿಐಡಿ ವಶಕ್ಕೆ ಪಡೆದಿದೆ ಎಂದು ಪೊಲೀಸ ಮೂಲಗಳು ತಿಳಿಸಿದೆ. ಬ್ಯಾಂಕ್ ಗ್ರಾಹಕರಿಂದ ಸುಮಾರು 54 ಕೋಟಿ ರೂ. ವಂಚನೆ ಮಾಡಿದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಈ ಬ್ಯಾಂಕ್ ವಂಚನೆ ಪ್ರಕರಣವನ್ನು ಕುರಿತು ಗ್ರಾಹಕರು ಹೋರಾಟ ನಡೆಸಿದ್ದರು. ಬ್ಯಾಂಕ್,ಮುಖ್ಯಸ್ಥ ಲಿಂಗರಾಜು ಪುತ್ತು ಕಲ್ಗುಟ್ಕರ ತಲೆಮರೆಸಿಕೊಂಡಿದ್ದರಿಂದ ಬಂಧನ ಅಗತ್ಯ ಎಂದು ಸಾರ್ವಜನಿಕರ ಬೇಡಿಕೆಗಳು ಸದಾ ಮುಂದಿಟ್ಟಿದ್ದವು.

ಜಿಲ್ಲಾಧಿಕಾರಿ, ಎಸ್‌ಪಿ ಮತ್ತು ಸಿಐಡಿ ಅಧಿಕಾರಿಗಳಿಗೆ ಗ್ರಾಹಕರು ಮನವಿ ಸಲ್ಲಿಸಿದ್ದರು ಜೊತೆಗೆ ಸಾಮಾಜಿಕ ಕಾರ್ಯಕರ್ತರೂ ಗ್ರಾಹಕರ ಪರ ಧ್ವನಿ ಎತ್ತಿದ್ದರು.

ನಾಳೆ (ಮಂಗಳವಾರ) ಚಿತ್ತಾಕುಲ ಪೊಲೀಸ್ ಠಾಣೆಯಿಂದ ವಂಚನೆಗೆ ಒಳಗಾದ ಗ್ರಾಹಕರೊಂದಿಗೆ ಸದಾಶಿವಗಡ ಕೊಂಕಣ ಮರಾಠ ಸಭಾಭವನದಲ್ಲಿ ಸಭೆ ನಡೆಯಲಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

 

 

Please Share: