ಬೆಂಗಳೂರು: ಕನ್ನಡ ಸಾಹಿತ್ಯದ ಮೇರು ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಡಾ. ಎಸ್. ಎಲ್. ಭೈರಪ್ಪ (94) ಬುಧವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅಸೌಖ್ಯದಿಂದ ಕೆಲ ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಎಸ್ ಎಲ್ ಭೈರಪ್ಪ ಎಂದೇ ಪ್ರಸಿದ್ಧರಾಗಿದ್ದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ ಹಾಗೂ ಚಿತ್ರಕಥೆಗಾರರಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಬರಹ ಶೈಲಿ, ತಾತ್ವಿಕ ಚಿಂತನೆ ಮತ್ತು ಸಮಾಜಮುಖಿ ಕೃತಿಗಳ ಮೂಲಕ ಭೈರಪ್ಪ ಅಪಾರ ಜನಪ್ರಿಯತೆ ಗಳಿಸಿದ್ದರು.
ಭಾರತೀಯ ಆಧುನಿಕ ಕಾದಂಬರಿಕಾರರಲ್ಲಿ ಅಗ್ರಗಣ್ಯರಾಗಿ ಪರಿಗಣಿಸಲ್ಪಟ್ಟ ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದಗೊಂಡು ವ್ಯಾಪಕವಾಗಿ ಓದಲ್ಪಟ್ಟಿವೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯ ಹಿನ್ನೆಲೆಯಲ್ಲಿ ಅವರು ಅನೇಕ ಗೌರವ-ಪುರಸ್ಕಾರಗಳನ್ನು ಸ್ವೀಕರಿಸಿದ್ದರು.


