ಕಾರವಾರ: ತಾಲೂಕಿನ ಅಮದಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಕಾರು-ಕಾರು ಡಿಕ್ಕಿ ಸಂಭವಿಸಿದ ಘಟನೆ ಆತಂಕ ಮೂಡಿಸಿದರೂ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ.

ಮಾಹಿತಿ ಪ್ರಕಾರ, ಕಾರವಾರ ಕಡೆಯಿಂದ ಅಂಕೋಲಾ ಮಾರ್ಗವಾಗಿ ತೆರಳುತ್ತಿದ್ದ ಆಲ್ಟೊ ಕಾರಿನ ಚಾಲಕ ಅಮದಳ್ಳಿ ಬಳಿ ಹಂಪ್ ಎದುರಾದ ಕಾರಣ ಕಾರಿನ ವೇಗ ಕಡಿಮೆ ಮಾಡಿದ್ದಾನೆ. ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಹ್ಯಾರಿಯರ್ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಆಲ್ಟೊ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ತೀವ್ರತೆಗೆ ಆಲ್ಟೊ ಕಾರಿನ ಹಿಂಬದಿ ಜಖಂಗೊಂಡಿದೆ. ಆದರೆ ಚಾಲಕರು ಹಾಗೂ ಪ್ರಯಾಣಿಕರು ಸುರಕ್ಷಿತವಾಗಿದ್ದು ದೊಡ್ಡ ಅನಾಹುತ ತಪ್ಪಿದೆ. ಈ ಕುರಿತು ಪೊಲೀಸ್ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

 

 

 

Please Share: