ಕರಾವಳಿ ವಾಯ್ಸ್ ನ್ಯೂಸ್

ಕುಮಟಾ: ಕಾರ್, ಬೈಕ್, ಮನೆ ಮತ್ತು ಬ್ಯಾಟರಿ ಕಳ್ಳತನದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಅಂತರ್‌ಜಿಲ್ಲಾ ಕಳ್ಳರನ್ನು ಕುಮಟಾ ಪೊಲೀಸರು ಕೇವಲ 48 ಗಂಟೆಗಳಲ್ಲಿ ಬಂಧಿಸಿದ್ದಾರೆ.

Banner Ad

ಅಕ್ಟೋಬರ್ 8ರಂದು ಮಧ್ಯರಾತ್ರಿ, ಅಮ್ರಾನ್ ಬ್ಯಾಟರಿ ಅಂಗಡಿಯಿಂದ 96,000 ಮೌಲ್ಯದ 12 ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿದ್ದರು. ಪ್ರಕರಣ ದಾಖಲಾಗುತ್ತಿದ್ದ ಜತೆಗೆ ಪೊಲೀಸರು ತ್ವರಿತ ತನಿಖೆ ನಡೆಸಿದರು.

ಬಂಧಿತರಲ್ಲಿ ಪೌಜಾನ್ ಅಹಮದ್, ಆಟೋ ಚಾಲಕ ಹಾಗೂ ಭಟ್ಕಳ ತಗ್ಗರಗೋಡ್ ಜಾಲಿ ನಿವಾಸಿ, ಮೊಹಮ್ಮದ್ ಸುಪಿಯಾನ್, ಟೈಲ್ಸ್ ಕಾರ್ಮಿಕ ಹಾಗೂ ಗುಳ್ಮೆ ಭಟ್ಕಳ ನಿವಾಸಿ ಎಂದು ಗುರುತಿಸಲಾಗಿದೆ. ಪತ್ತೆಯಾದ ವಸ್ತುಗಳಲ್ಲಿ 12 ಅಮ್ರಾನ್ ಬ್ಯಾಟರಿಗಳು ಮತ್ತು ಲಕ್ಷ ಮೌಲ್ಯದ Maruti Ritz ಕಾರು ಇದ್ದವು. ತನಿಖೆಯಲ್ಲಿ ಈ ಕಾರು ಹಾಸನ ಜಿಲ್ಲೆಯ ಬೇಲೂರು ಠಾಣೆಯಿಂದ ಕಳ್ಳತನವಾಗಿರುವುದು ದೃಢಪಟ್ಟಿದ್ದು, ಪೌಜಾನ್ ಅಹಮದ್ ಇದನ್ನು ಕದ್ದೊಯ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿತರು ಭಟ್ಕಳ ನಗರ, ಭಟ್ಕಳ ಗ್ರಾಮೀಣ, ಬೈಂದೂರು, ಗಂಗೊಳ್ಳಿ ಹಾಗೂ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕುಮಟಾ ಪೊಲೀಸರು ಬಂಧಿತರಿಂದ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡು, ತ್ವರಿತ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಯೋಗೇಶ್ ಕೆ.ಎಂ. ಮತ್ತು ತನಿಖಾಧಿಕಾರಿ ಮಯೂರ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಣೇಶ್ ನಾಯ್ಕ, ದಯಾನಂದ ನಾಯ್ಕ, ಚಿದಾನಂದ ನಾಯ್ಕ, ಕಿರಣ ನಾಯ್ಕ, ಪ್ರದೀಪ ನಾಯ್ಕ ಮತ್ತು ಸಿ.ಡಿ.ಆರ್. ಸೆಲ್‌ನ ಉದಯ ಗುನಗಾ ಕಾರ್ಯಾಚರಣೆ ನಡೆಸಿದ್ದರು.

 

 

 

 

Please Share: