ಕರಾವಳಿ ವಾಯ್ಸ್ ನ್ಯೂಸ್ 

ಶಿರಸಿ: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸವಾರನ ನೆರವಿಗೆ ಧಾವಿಸಿದ 112 ತುರ್ತು ಸೇವೆಯ ಪೊಲೀಸ್ ಸಿಬ್ಬಂದಿ, ಸಮಯೋಚಿತ ಕಾರ್ಯಾಚರಣೆಯ ಮೂಲಕ ಮಾನವೀಯತೆ ಮೆರೆದಿದ್ದಾರೆ.

Banner Ad

ಅ. 9ರಂದು ರಾತ್ರಿ 1 ಗಂಟೆ ಸುಮಾರಿಗೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಚ್‌ಬಿ ಕಾಲೋನಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದ ಸಮೀಪ ಈ ಘಟನೆ ನಡೆದಿದೆ.

ಸ್ಕೂಟಿ (KA-31-EF-0031) ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ದರ್ಶನ್ ಮಂಜುನಾಥ ನಾಯ್ಕ ಅವರ ತಲೆಗೆ ಗಾಯವಾಗಿ ರಕ್ತಸ್ರಾವವಾಗಿತ್ತು. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ 112 ತುರ್ತು ಸೇವೆಯ ರೂಟ್ ನಂ. 14ಕ್ಕೆ ಮಾಹಿತಿ ಲಭಿಸಿತ್ತು.

ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಶಿರಸಿಯ ಪಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಅಗತ್ಯ ಕ್ರಮ ಕೈಗೊಂಡರು.

ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಗಾಯಾಳುವಿಗೆ ನೆರವಾದ ಪೊಲೀಸ್ ಸಿಬ್ಬಂದಿ ಸಿಪಿಸಿ-659 ಪ್ರಕಾಶ್ ಬೊವಿವಡ್ಡರ್ ಹಾಗೂ ವಾಹನ ಚಾಲಕ ಎ.ಎಚ್‌.ಸಿ. ಮುಕ್ತಿಯಾರ್ ಮಂಡಕ್ಕಿ ಅವರ ಕರ್ತವ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿ ಅಭಿನಂದಿಸಿದೆ.

 

 

 

 

Please Share: